ಅಮಾನವೀಯ: ತಾಯಿಯ ಕಾಯಿಲೆ ಗುಣಪಡಿಸಲು ಮಗುವನ್ನೇ ಬಲಿ ನೀಡಿದ ದುರುಳರು
ತಾಯಿಯ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ ಪುಟ್ಟ ಮಗುವನ್ನೇ ಬಲಿ ನೀಡಿದ ದಾರುಣ ಘಟನೆ ಉತ್ತರ ಪ್ರದೇಶದ ಮುಜಫರ್ ನಗರ ಸಮೀಪದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಮಮತಾ ಮತ್ತು ತಂದೆ ಗೋಪಾಲ್ ಕಶ್ಯಪ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಗುವಿನ ತಾಯಿ ದೀರ್ಘಕಾಲದಿಂದ ಅನಾರೋಗ್ಯದಲ್ಲಿದ್ದಳು. ಮಗುವನ್ನು ಬಲಿ ನೀಡಿದರೆ ಕಾಯಿಲೆಯಿಂದ ಗುಣಮುಖವಾಗಬಹುದು ಎಂದು ಮಂತ್ರವಾದಿಯೊಬ್ಬ ಸಲಹೆ ನೀಡಿದ್ದ. ಆ ಬಳಿಕ ಮಗುವನ್ನು ಕೊಂದು ಮೃತದೇಹವನ್ನು ಕಾಡಿಗೆ ಎಸೆಯಲಾಯಿತು ಎಂದು ಈ ದಂಪತಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರೊಂದಿಗೆ ಈ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ.
ಒಂದು ವರ್ಷದ ಮಗುವನ್ನು ಹೀಗೆ ಬಲಿ ನೀಡಲಾಗಿದೆ. ಮಗು ಕಾಣದೆ ಇರುವುದರಿಂದ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಮಗುವನ್ನು ಬಲಿ ನೀಡುವುದಕ್ಕೆ ಪ್ರೇರೇಪಿಸಿದ ಮಂತ್ರವಾದಿ ಹರೇಂದ್ರನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth