ನರಹತ್ಯೆ ಕೇಸ್: ಪ್ರಮುಖ ದಾಖಲೆಗಳನ್ನು ತಿಂದ ಇಲಿ; ಕೋರ್ಟ್ ನಿಂದ ಪೊಲೀಸರಿಗೆ ಕ್ಲಾಸ್
ನರಹತ್ಯೆಗೆ ಸಂಬಂಧಿಸಿ ನಿರ್ಣಾಯಕ ದಾಖಲೆಗಳು ಸೇರಿದಂತೆ 29 ಸ್ಯಾಂಪಲ್ ಗಳನ್ನು ಇಲಿಗಳು ತಿಂದು ನಾಶ ಮಾಡಿರುವುದಾಗಿ ಮಧ್ಯಪ್ರದೇಶದ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ವಿಶೇಷ ಘಟನೆ ನಡೆದಿದೆ. ಮಾತ್ರವಲ್ಲ, ನ್ಯಾಯಾಲಯ ಈ ಪೊಲೀಸರನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದೆ. ಪೊಲೀಸ್ ಠಾಣೆಯ ಅತ್ಯಂತ ನಿರ್ಲಕ್ಷ ಧೋರಣೆಯನ್ನು ಇದು ತಿಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
2021 ರಲ್ಲಿ ನಡೆದ ಘಟನೆಯ ವಿಚಾರಣೆ ನಡೆಸುವ ವೇಳೆ ಇದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಪತ್ನಿಯನ್ನು ಹಿಂಸಿಸಿ ಹತ್ಯೆ ಮಾಡಿದ ವ್ಯಕ್ತಿಯ ಜಾಮೀನು ಕೋರಿಕೆಗೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅನ್ಸಾದ್ ಎಂಬವ ತನ್ನ ಪತ್ನಿ ತಾಹಿರಾಳನ್ನು ಹಿಂಸಿಸಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷಿವನ್ನು ಸಂಗ್ರಹಿಸಿ ಠಾಣೆಯಲ್ಲಿ ಕಾಪಿಟ್ಟಿದ್ದರು.
ಅಕ್ಟೋಬರ್ 4ರಂದು ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹಾಜರಾದ ಪೊಲೀಸ್ ಅಧಿಕಾರಿ ದಾಖಲೆಗಳನ್ನು ಇಲಿ ತಿಂದಿರುವುದಾಗಿ ಹೇಳಿದರು. ಬಹುಮುಖ್ಯ ದಾಖಲೆಗಳನ್ನು ಇಲಿ ನಾಶ ಮಾಡಿದೆ ಎಂದು ಅಭಿನವ್ ವಿಶ್ವಕರ್ಮ ಮತ್ತು ಚಂದ್ರಕಾಂತ್ ಪಾಟೀಲ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಪ್ಲಾಸ್ಟಿಕ್ ಕವರ್ ನಲ್ಲಿ ನಾವು ಈ ಸಾಕ್ಷ್ಯಗಳನ್ನು ಕಾಪಿಟ್ಟಿದ್ದೆವು. ಆದರೆ ಮಳೆಗಾಲದಲ್ಲಿ ಇಲಿಗಳು ಅವುಗಳನ್ನು ತಿಂದು ಮುಗಿಸಿವೆ ಎಂದವರು ಹೇಳಿದರು.
ಇಂದೋರಿನ ಬಹು ಪ್ರಮುಖ ಪೊಲೀಸ್ ಠಾಣೆಯಲ್ಲಿಯೇ ಹೀಗೆ ನಡೆಯುತ್ತದೆ ಎಂದಾದರೆ ಉಳಿದ ಸಣ್ಣ ಪೊಲೀಸ್ ಠಾಣೆಗಳ ಪರಿಸ್ಥಿತಿ ಹೇಗಿರಬಹುದು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth