ಖರೀದಿಗೆ ಹೋದಾಗ ಶಾಕ್: ಬಿಸ್ಕೆಟ್ ನಲ್ಲಿ ಪತ್ತೆಯಾಯ್ತು ಕಬ್ಬಿಣದ ಚೂರು!
ಮಕ್ಕಳಿಗೆಂದು ಖರೀದಿಸಿದ ಬರ್ಬನ್ ಬಿಸ್ಕೆಟ್ ನಲ್ಲಿ ಕಬ್ಬಿಣದ ಚೂರು ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನ ಕಾಮರೆಡ್ಡಿ ಜಿಲ್ಲೆಯ ಹನುಮಾನ್ ರೆಡ್ಡಿ ಈ ಮಾಹಿತಿಯನ್ನು ವಿಡಿಯೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಮಕ್ಕಳು ಈ ಬಿಸ್ಕೆಟ್ ಅನ್ನು ತಿನ್ನುವ ವೇಳೆ ತಾನು ಇದನ್ನು ಪತ್ತೆ ಹಚ್ಚಿರುವುದಾಗಿ ಅವರು ಹೇಳಿಕೊಂಡಿದ್ದು ಇಂತಹ ಉತ್ಪನ್ನಗಳನ್ನು ಉಪಯೋಗಿಸುವ ಮೊದಲು ಹೆತ್ತವರು ಜಾಗರೂಕತೆ ಪಾಲಿಸಬೇಕು ಎಂದು ಹೇಳಿದ್ದಾರೆ. ಹತ್ತಿರದ ಅಂಗಡಿಯಿಂದ ತಾನು ಈ ಬಿಸ್ಕೆಟನ್ನು ಖರೀದಿಸಿ ರುವುದಾಗಿ ಅವರು ಹೇಳಿದ್ದಾರೆ.
ಮಕ್ಕಳು ಪಾಕೆಟ್ ಉತ್ಪನ್ನಗಳನ್ನು ಖರೀದಿಸುತ್ತಾರೆ ಮತ್ತು ಅಲ್ಲಿಯೇ ಸೇವಿಸುತ್ತಾರೆ. ಕೆಲವೊಮ್ಮೆ ಮನೆಗೆ ತಂದು ಸೇವಿಸುತ್ತಾರೆ. ಈ ಸಂದರ್ಭಗಳಲ್ಲಿ ಹೆತ್ತವರು ಹೆಚ್ಚು ಜಾಗೃತೆಯನ್ನು ಪಾಲಿಸಬೇಕು. ಮಕ್ಕಳಿಗೆ ಗೊತ್ತಿಲ್ಲದೆಯೇ ಕೆಲವೊಮ್ಮೆ ಇಂತಹ ತುಣುಕುಗಳು ಹೊಟ್ಟೆ ಸೇರಿ ಅಪಾಯವನ್ನು ತಂದೊಡ್ಡಬಹುದು ಎಂದವರು ಹೇಳಿದ್ದಾರೆ.
ರೆಡ್ಡಿಯವರು ಹಂಚಿಕೊಂಡ ಈ ವಿಡಿಯೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಸ್ಕ್ಯೂಟ್ ಕಂಪನಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth