ಹಸುಗಳು ಬಾರದಂತೆ ತಡೆಯಲು ನಿರ್ಮಿಸಿದ್ದ ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ
ಕೊಟ್ಟಿಗೆಹಾರ: ಹಸುಗಳು ಸರ್ಕಾರಿ ಬಸ್ ನಿಲ್ದಾಣದ ಒಳಗಡೆ ಬರಬಾರದು ಎಂದು ನಿರ್ಮಿಸಿರುವ ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಮೂಲದ ಪ್ರವಾಸಿಗ ಗಾಯಗೊಂಡು ಕಾಲನ್ನ ತರಚಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಕಾರ್ತಿಕ್ ಸರ್ಕಾರಿ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದರು. ಈ ವೇಳೆ, ಕೊಟ್ಟಿಗೆಹಾರದಲ್ಲಿ ಬಸ್ ನಿಲ್ಲಿಸಿದಾಗ ಟೀ ಕುಡಿಯಲು ಹೋಗುತ್ತಿದ್ದ ಕಾರ್ತಿಕ್ ಕೌ ಗಾರ್ಡಿನ ಕಬ್ಬಿಣದ ರಾಡ್ ಗಳು ಮುರಿದು ಗುಂಡಿ ಬಿದ್ದಿರುವುದನ್ನು ಗಮನಿಸದೇ ಅದರ ಒಳಗೆ ಕಾಲಿಟ್ಟು ಕಾಲನ್ನು ಗಾಯ ಮಾಡಿಕೊಂಡಿದ್ದಾರೆ.
ಕೌ ಗಾರ್ಡ್ ಕೆಳಗಡೆ ಮಳೆ ನೀರು ಹೋಗಲು ದೊಡ್ಡದಾದ ಚರಂಡಿಯಂತಿದ್ದು ಕಾರ್ತಿಕ್ ನ ಕಾಲು ಸಂಪೂರ್ಣವಾಗಿ ಚಂಡಿ ಒಳಗೆ ಇಳಿದಿತ್ತು. ಇದರಿಂದ ಕಬ್ಬಿಣದ ರಾಡ್ ಗಳು ಕಾಲಿಗೆ ಬಡಿದು ಒಳ ಭಾಗಕ್ಕೂ ನೋವಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರೆ ಪ್ರಯಾಣಿಕರು ಅವರನ್ನ ಮೇಲೆಕ್ಕೆ ಎತ್ತಿದ್ದಾರೆ.
ಕೊಟ್ಟಿಗೆಹಾರ ಬಸ್ ನಿಲ್ದಾಣದ ಕೌ ಗಾರ್ಡ್ ಹಾಳಾಗಿ ವರ್ಷಗಳೇ ಕಳೆದಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ದೂರದ ಊರಿಂದ ಬರುವ ಪ್ರಯಾಣಿಕರು ಇದನ್ನ ಗಮನಿಸದೆ ಸಾಕಷ್ಟು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಸ್ಕೂಟಿಯ ಒಂದು ಟೈಯರ್ ಸಂಪೂರ್ಣವಾಗಿ ಕೌ ಗಾರ್ಡ್ ಒಳಗೆ ಇಳಿಯಲಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರು ಸೂಕ್ತ ಕ್ರಮ ಕೈಗೊಳ್ಳದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: