ಐಸಿಯುನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಗೆ ಲೈಂಗಿಕ ಕಿರುಕುಳ - Mahanayaka
9:23 AM Wednesday 5 - February 2025

ಐಸಿಯುನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

icu
18/03/2021

ಜೈಪುರ: ತೀವ್ರ ನಿಗಾ ಘಟಕದಲ್ಲಿ ದಾಖಲಾದ ಮಹಿಳೆಯೋರ್ವರಿಗೆ  ಪುರುಷ ನರ್ಸ್ ವೋರ್ವ ಐಸಿಯು ಒಳಗೆಯೇ ಲೈಂಗಿಕ ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಮೇಲೆ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತ ಕಿರುಕುಳ ನೀಡಿದ ಸಂದರ್ಭ ಎಚ್ಚೆತ್ತುಕೊಂಡ ಮಹಿಳೆ ಆತನನ್ನು ತಡೆಯಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು,  ಸೋಮವಾರ ಮಹಿಳೆಗೆ ಪ್ರಜ್ಞೆ ಮರಳಿದಾಗ ಕಿರುಕುಳ ನೀಡಿರುವ  ವಿಚಾರವನ್ನು ಮಹಿಳೆಯು ತನ್ನ ಪತಿಗೆ ತಿಳಿಸಿದ್ದಾರೆ. ಇದರನ್ವಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ