ರಿಲಯನ್ಸ್ ಜಿಯೋದಿಂದ ಹೊಸ ಐಎಸ್‌ ಡಿ ಪ್ಲಾನ್ಸ್ ಘೋಷಣೆ - Mahanayaka
10:57 AM Thursday 12 - December 2024

ರಿಲಯನ್ಸ್ ಜಿಯೋದಿಂದ ಹೊಸ ಐಎಸ್‌ ಡಿ ಪ್ಲಾನ್ಸ್ ಘೋಷಣೆ

jio
14/10/2024

ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ ₹39 ರಿಂದ ಆರಂಭವಾಗುವ ಪ್ರೀ–ಪೇಯ್ಡ್ ಮತ್ತು ಪೋಸ್ಟ್–ಪೇಯ್ಡ್‌ ನ ಹೊಸ ಐಎಸ್‌ ಡಿ ಪ್ಯಾಕ್‌ ಗಳನ್ನು ನೀಡಿದೆ. ಈ ಎಲ್ಲಾ ಯೋಜನೆಗಳು  7 ದಿನಗಳ ವ್ಯಾಲಿಡಿಟಿ ಹೊಂದಿರಲಿವೆ.

ಯುಎಸ್‌ಎ ಮತ್ತು ಕೆನಡಾ ದೇಶಗಳಿಗೆ ₹39 ದರದ ಐಎಸ್‌ ಡಿ 7 ದಿನಗಳ ವ್ಯಾಲಿಡಿಟಿಯ ಪ್ಲಾನ್ ನೀಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು 30 ನಿಮಿಷಗಳ ಕರೆ ಸೌಲಭ್ಯ ಇರಲಿದೆ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಕುವೈತ್, ಟರ್ಕಿ ಮತ್ತು ಬಹ್ರೇನ್ ದೇಶಗಳಿಗೆ  ₹99ರ ಪ್ಲಾನ್‌ ನಲ್ಲಿ 10 ನಿಮಿಷಗಳ ಕರೆ ಸೌಲಭ್ಯ ಲಭ್ಯ. ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಗ್‌ ಕಾಂಗ್‌ ಗೆ ಕರೆ ಮಾಡುವವರಿಗೆ 15 ನಿಮಿಷಗಳ ಕರೆ ಸೌಲಭ್ಯ ಇರುವ ₹59 ರ ಯೋಜನೆ ನೀಡಲಾಗಿದೆ.

ಚೀನಾ, ಜಪಾನ್, ಬೂತಾನ್‌ ಗೆ 15 ನಿಮಿಷಗಳ ಕರೆ ಸೌಲಭ್ಯದ ₹89ರ ಪ್ಲಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ₹69 ರ ಬೆಲೆಯ 15 ನಿಮಿಷಗಳ ಕರೆ, ಬಾಂಗ್ಲಾದೇಶಕ್ಕೆ ₹49 ರ ಬೆಲೆಯ 20  ನಿಮಿಷಗಳ ಕರೆ ಹಾಗೂ ಯುಕೆ, ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್‌ ಗೆ 10 ನಿಮಿಷಗಳ ಕರೆ ಸೌಲಭ್ಯದ ₹79ರ ಪ್ಲಾನ್ ನೀಡಲಾಗಿದೆ.

ಈ ಹೊಸ ಐಎಸ್‌ ಡಿ ರಿಚಾರ್ಜ್ ಪ್ಲಾನ್ ಗಳು ಅಕ್ಟೋಬರ್ 10 ರಿಂದ ಜಾರಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ