ಯುವತಿಯರು ಹರಿದ ಜೀನ್ಸ್ ಹಾಕುವುದು ಸಮಾಜಕ್ಕೆ ಕೆಟ್ಟ ಸಂದೇಶ | ಉತ್ತರಾಖಂಡ್ ಸಿಎಂನ ಹೇಳಿಕೆ
ಉತ್ತರಖಂಡ: ಉತ್ತರಾಖಂಡ್ ನಲ್ಲಿ ಹೊಸದಾಗಿ ನೇಮಕಗೊಂಡಿರುವ ಸಿಎಂ ತೀರ್ಥ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹರಿದ ಜೀನ್ಸ್ ಹಾಕುವ ಯುವತಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.
ಹರಿದ ಜೀನ್ಸ್ ಧರಿಸುವ ಯುವತಿಯರು ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು, ,ಮಂಡಿ ತೋರಿಸಿಕೊಂಡು ಶ್ರೀಮಂತರ ಮಕ್ಕಳಂತೆ ನಡೆಯುವುದು ಈಗಿನ ಟ್ರೆಂಡ್ ಆಗಿದೆ ಎಂದು ಅವರು ಹೇಳಿದ್ದಾರೆ.
ಹರಿದ ಪ್ಯಾಂಟ್ ಧರಿಸಿದ ಮಗಳನ್ನು ನಾನು ಎತ್ತಕೊಂಡೊಯ್ಯುತ್ತಿದ್ದೇನೆ ಎನ್ನುವುದನ್ನು ಪೋಷಕರು ಯೋಚಿಸಬೇಕು ಎಂದು ಅವರು ಹೇಳಿದ್ದು, ಹರಿದ ಪ್ಯಾಂಟ್ ಗಳಲ್ಲಿ ಮಂಡಿ ತೋರಿಸಿಕೊಂಡು ಶ್ರೀಮಂತರ ಮಕ್ಕಳಂತೆ ಈಗಿನ ಜನತೆ ನಡೆಯುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೀಡಾಗಿದೆ. ಬಟ್ಟೆ ಧರಿಸುವುದು ಅವರವರ ವೈಯಕ್ತಿಕ ವಿಚಾರ. ಕೆಲವರು ಷರ್ಟ್ ತೊಡದೇ ನಗರದಲ್ಲಿ ಸುತ್ತಾಡಿದರೂ ಅವರನ್ನು ಯಾರೂ ಕೇಳುವುದಿಲ್ಲ. ಅದು ಧಾರ್ಮಿಕತೆ ಎಂದು ಹೇಳುತ್ತಾರೆ. ಆದರೆ ಮಂಡಿ ತೋರಿಸಿಕೊಂಡು ನಡೆದರೆ¸ ಅದು ಕೆಟ್ಟ ಸಂದೇಶ ಎಂಬ ಚರ್ಚೆಗಳು ಕೇಳಿ ಬಂದಿವೆ.