ಹೆಚ್ಚಳ: 1 ಕೋಟಿಯನ್ನು ದಾಟಿದ ಮಸ್ಜಿದುನ್ನಬವಿಗೆ ಭೇಟಿ ನೀಡಿದವರ ಸಂಖ್ಯೆ
ಕಳೆದ 10 ತಿಂಗಳಲ್ಲಿ ಮದೀನಾದ ಮಸ್ಜಿದುನ್ನಬವಿಗೆ ಭೇಟಿ ನೀಡಿದವರ ಸಂಖ್ಯೆ ಒಂದು ಕೋಟಿಯನ್ನೂ ದಾಟಿದೆ. 55 ಲಕ್ಷದ 83,885 ಮಂದಿ ಪುರುಷರು ಮತ್ತು 47 ಲಕ್ಷದ 26 ಸಾವಿರದ 247 ಮಂದಿ ಮಹಿಳೆಯರು ಮಸ್ಜಿದುನ್ನ ಬವಿಗೆ ಭೇಟಿ ನೀಡಿದ್ದಾರೆ ಎಂದು ಮಕ್ಕ ಮತ್ತು ಮದೀನಾ ಹರಂಗಳ ಕಾರ್ಯಾಲಯ ತಿಳಿಸಿದೆ.
ಪ್ರವಾದಿ ಮಸೀದಿಯ ರೌಲ ಸಂದರ್ಶನಕ್ಕೆ ವರ್ಷದಲ್ಲಿ ಓರ್ವರಿಗೆ ಒಮ್ಮೆ ಮಾತ್ರ ಅನುಮತಿ ನೀಡುವ ನಿಯಮವನ್ನು ಹಜ್ ಉಮ್ರಾ ಸಚಿವಾಲಯ ಜಾರಿಗೆ ತಂದಿದೆ. ರೌಲ ಸಂದರ್ಶಿಸಲು ನುಸುಕ್ ಅಥವಾ ತವಕ್ಕಲ್ ಅಪ್ಲಿಕೇಶನ್ ಮೂಲಕ ಅನುಮತಿ ಪಡೆಯಬೇಕು. ಓರ್ವರಿಗೆ ಈ ಪರ್ಮಿಟ್ ವರ್ಷದಲ್ಲಿ ಒಮ್ಮೆ ಮಾತ್ರ ಲಭಿಸುತ್ತದೆ.
ಮಸ್ಜಿದುನ್ನಬವಿಯಲ್ಲಿರುವ ಪ್ರವಾದಿಯವರ ಸಮಾಧಿ ಮತ್ತು ಅವರ ಪ್ರವಚನ ಪೀಠದ ನಡುವೆ ಇರುವ ಸ್ಥಳ ರೌಲ ಶರೀಫ್ ಆಗಿ ಗುರುತಿಸಿಕೊಳ್ಳುತ್ತದೆ. ಯಾರಿಗೆ ಅನುಮತಿ ಲಭಿಸುತ್ತದೋ ಅವರಿಗೆ 20 ನಿಮಿಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ. ಆದರೆ ಪ್ರತಿದಿನ ಸಂದರ್ಶಿಸುವವರ ಸಂಖ್ಯೆ 48000 ಕ್ಕೆ ಏರಿದ ಕಾರಣ ಇದೀಗ ಪ್ರಾರ್ಥನಾ ಸಮಯವನ್ನು 10 ನಿಮಿಷಕ್ಕೆ ಕುಗ್ಗಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth