ಮಾರ್ಪಾಡು: ರೈಲ್ವೆ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆ ನಿಯಮಗಳಲ್ಲಿ ಬದಲಾವಣೆ
ರೈಲ್ವೆ ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ದೀಪಾವಳಿಗೂ ಮುನ್ನ ಐಆರ್‌ಸಿಟಿಸಿ ಈ ಬದಲಾವಣೆ ಮಾಡಿದೆ. ಸದ್ಯ 120 ದಿನಗಳಿಗೂ ಮುನ್ನ ರೈಲಿನ ಟಿಕೆಟ್ ಕಾಯ್ದಿರಿಸುವ ಅವಕಾಶ ಇದೆ. ಇದನ್ನೀಗ 60 ದಿನಗಳಿಗೆ ಇಳಿಕೆ ಮಾಡಲಾಗಿದೆ.
ಇನ್ನು ಮುಂದೆ ರೈಲ್ವೆ ಪ್ರಯಾಣಿಕರು 120 ದಿನಗಳ ಬದಲಾಗಿ 60 ದಿನ ಮುಂಚೆಯಷ್ಟೇ ತಮ್ಮ ಪ್ರಯಾಣದ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ. ಭಾರತೀಯ ರೈಲ್ವೆಯ ಈ ಹೊಸ ನಿಯಮಗಳು ಇದೇ ನವೆಂಬರ್ 1, 2024ರಿಂದ ಜಾರಿಗೆ ಬರಲಿವೆ.
ತಾಜ್ ಎಕ್ಸ್‌ಪ್ರೆಸ್, ಗೋಮ್ತಿ ಎಕ್ಸ್‌ಪ್ರೆಸ್‌ನಂತಹ ಹಗಲು ಹೊತ್ತಿನಲ್ಲಿ ಓಡಾಟ ನಡೆಸುವ ರೈಲುಗಳ ಬುಕ್ಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕಾರಣ ಈ ರೈಲುಗಳಲ್ಲಿ ಈಗಾಗಲೇ 60 ದಿನಗಳ ಬುಕ್ಕಿಂಗ್ ನಿಯಮ ಜಾರಿಯಲ್ಲಿದೆ.
ಅಲ್ಲದೆ, ವಿದೇಶಿ ಪ್ರವಾಸಿಗರಿಗೆ ಇರುವ 365 ದಿನಗಳ ಮಿತಿಯಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ನವೆಂಬರ್ 1ಕ್ಕೂ ಮುನ್ನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರೆ ಈ ನಿಯಮಗಳು ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth