ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಮಾಜಿ ಸಚಿವ ಬಿ.ನಾಗೇಂದ್ರ!
ಬಳ್ಳಾರಿ: ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ವಾಲ್ಮೀಕಿ ನಿಗಮ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ, ತಮ್ಮ ಮೇಲಿನ ಆರೋಪವನ್ನು ನೆನೆಸಿ ಕಣ್ಣೀರು ಹಾಕಿರುವ ಘಟನೆ ನಡೆಯಿತು.
ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದವರು ಯಾರೂ ಕೂಡ ಇಂತಹ ನೀಚ ಕೆಲ್ಸಕ್ಕೆ ಕೈ ಹಾಕಲ್ಲ. ನಾನು ಆರೋಪ ಮುಕ್ತ ಅಂತಾ ಫ್ರೂವ್ ಮಾಡಿಕೊಂಡು ಬಳ್ಳಾರಿ ಜಿಲ್ಲೆಗೆ ಬರಬೇಕು ಅಂತಾ ಅನ್ಕೊಂಡಿದ್ದೆ. ಆದರೆ ಈ ಕೆಟ್ಟ ರಾಜಕೀಯದಿಂದ ನನ್ನನ್ನು ಜೈಲಿಗೆ ಕಳುಹಿಸಿದರು. ಈ ಕೆಟ್ಟ ರಾಜಕೀಯ ಮಾಡಿದವರನ್ನ ಈ ಜಿಲ್ಲೆಯಿಂದ ಕಿತ್ತೊಗೆಯುವ ಕೆಲ್ಸ ಮಾಡುವೆ ಎಂದು ಹೇಳಿದರು.
ಈ ವೇಳೆ ನಾಗೇಂದ್ರ ಕಣ್ಣೀರು ಹಾಕುತ್ತ ಮಾತನಾಡಿದ ಅವರು, ನನ್ನ ಆತ್ಮಕ್ಕೆ ಗೊತ್ತು ವಾಲ್ಮೀಕಿ ನಿಗಮದಲ್ಲಿ ಏನ್ ಆಗಿದೆ ಅಂತಾ.. ಮೂರು ತಿಂಗಳಲ್ಲಿ ನಾನು ಜೈಲಿನಲ್ಲಿ ನೋವು ಅನುಭವಿಸಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ತೀರ್ಮಾನ ಮಾಡಿದ್ದೆ. ಹೀಗೆ ಮಾಡಿದ್ರೆ ಜಿಲ್ಲೆ ರಾಜ್ಯದ ಜನರು ನಾನು ತಪ್ಪು ಮಾಡಿದ್ದೇನೆ ಅಂತಾ ತಿಳಿದುಕೊಳ್ತಾರೆ. ಹೀಗಾಗಿ ಇದ್ರಿಂದ ನಾನು ದೋಷಮುಕ್ತನಾಗಿ ಹೊರಬರುತ್ತೇನೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: