ಬಿಜೆಪಿ ಅಭ್ಯರ್ಥಿಯ ಕಾಲು ತೊಳೆದು, ನಮಸ್ಕರಿಸಿದ ಮತದಾರರು | ಕೇರಳಕ್ಕೂ ವಕ್ಕರಿಸಿತೇ ಗುಲಾಮಿ ಸಂಸ್ಕೃತಿ? - Mahanayaka
10:21 PM Thursday 12 - December 2024

ಬಿಜೆಪಿ ಅಭ್ಯರ್ಥಿಯ ಕಾಲು ತೊಳೆದು, ನಮಸ್ಕರಿಸಿದ ಮತದಾರರು | ಕೇರಳಕ್ಕೂ ವಕ್ಕರಿಸಿತೇ ಗುಲಾಮಿ ಸಂಸ್ಕೃತಿ?

e shreedharan
19/03/2021

ಪಾಲಕ್ಕಾಡ್: ಕೇರಳದಲ್ಲಿ ಬಿಜೆಪಿ ತನ್ನ ಗುಲಾಮಿ ಸಂಸ್ಕೃತಿಯನ್ನು ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿ ಇ ಶ್ರೀಧರನ್ ಪಾದ ತೊಳೆದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಬಳಿಕ ಅವರಿಗೆ  ನಮಸ್ಕರಿಸುತ್ತಿರುವ ಚಿತ್ರವೊಂದು ವ್ಯಾಪಕ ವೈರಲ್ ಆಗಿದೆ.

ಇ.ಶ್ರೀಧರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿನ ಮತದಾರರು ಹಾಗೂ ಕಾರ್ಯಕರ್ತರು ಬಿಜೆಪಿಯ ಸಂಸ್ಕೃತಿಯ ಪ್ರಕಾರ ಇ ಶ್ರೀಧರನ್ ಅವರ ಕಾಲು ತೊಳೆದು, ಕಾಲಿಗೆ ನಮಸ್ಕರಿಸುತ್ತಿರುವ ಗುಲಾಮಗಿರಿಯ ಸಂಸ್ಕೃತಿಯನ್ನು ಪ್ರದರ್ಶಿಸಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ.

ಬಿಜೆಪಿಯು ಈ ಕೃತ್ಯದ ಮೂಲಕ ಜಾತಿವಾದದ ಸಂಸ್ಕೃತಿಯನ್ನು ಕೇರಳದಲ್ಲಿ ಹೇರಲು ಮುಂದಾಗುತ್ತಿದೆ.  ಮೇಲ್ಜಾತಿ ಹಾಗೂ ಶ್ರೀಮಂತರ ಪಾದ ತೊಳೆಯುವ ಮತ್ತು  ನಮಸ್ಕರಿಸುವ ಅನಿಷ್ಠ ಸಂಸ್ಕೃತಿಯನ್ನು ಹೇರಲು ಬಿಜೆಪಿ ಈಗಿನಿಂದಲೇ ಸಿದ್ಧತೆ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ