ಅಭಿವೃದ್ಧಿ ಎಲ್ಲಿ? ಬಡವರ ಸಂಖ್ಯೆಯಲ್ಲಿ ಭಾರತ ಶ್ರೀಮಂತ: ಸವಾಲಾದ ಬಡತನ!
ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.
ಬಡತನ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ವಿವಿಧ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಬಡತನ ಭಾರತದ ಪಾಲಿಗೆ ಇನ್ನೂ ಸವಾಲಾಗಿಯೇ ಇದೆ ಎಂದು ವರದಿ ಹೇಳುತ್ತಿದೆ.
ಭಾರತವನ್ನು ಮಧ್ಯಮ ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇತ್ತ ಪಾಕಿಸ್ತಾನವನ್ನು ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿರುವ ದೇಶಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಜೊತೆಗೆ ಇಥಿಯೋಪಿಯಾ, ನೈಜೀರಿಯಾ, ಕಾಂಗೋ ದೇಶಗಳೂ ಸೇರಿವೆ.
ವಿಶ್ವಾದ್ಯಂತ ಇರುವ ಬಡವರ ಪೈಕಿ ಶೇ. 83ಕ್ಕೂ ಹೆಚ್ಚು ಮಂದಿ ಬಡವರು ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲೇ ಇದ್ದಾರೆ. ಈ ಮೂಲಕ ಬಡತನ ಅನ್ನೋದು ಯಾವ ರೀತಿ ಕೆಲವೇ ರಾಷ್ಟ್ರಗಳಿಗೆ ಸೀಮಿತ ಆಗಿದೆ ಅನ್ನೋದನ್ನ ಈ ಅಂಕಿ ಅಂಶ ಬಯಲು ಮಾಡುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth