ಅಕ್ರಮ ದನ ಸಾಗಾಟ: ಇಬ್ಬರು ಆರೋಪಿಗಳ ಬಂಧನ: ದನ, ಪಿಕಪ್ ವಾಹನ ವಶ - Mahanayaka
5:28 PM Thursday 12 - December 2024

ಅಕ್ರಮ ದನ ಸಾಗಾಟ: ಇಬ್ಬರು ಆರೋಪಿಗಳ ಬಂಧನ: ದನ, ಪಿಕಪ್ ವಾಹನ ವಶ

cow
19/10/2024

ಬೆಳ್ತಂಗಡಿ: ಅಕ್ರಮವಾಗಿ ಪಿಕಪ್ ನಲ್ಲಿ ಹಿಂಸಾತ್ಮಕವಾಗಿ ದನಸಾಗಾಟ ಮಾಡುತ್ತಿದ್ದ ಚಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, ದನ ಹಾಗೂ ವಾಹವನ್ನು ವಶಕ್ಕೆ ಪಡೆದ ಘಟನೆ ಇಲ್ಲಿನ ಮದ್ದಡ್ಕ ಎಂಬಲ್ಲಿ ನಡೆದಿದೆ.

ಅಶ್ವಥ್(34) ಹಾಗೂ ಸಚಿನ್(27) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇವರು ಕೊಟ್ಟಿಗೆಹಾರ ನಿವಾಸಿಗಳಾಗಿದ್ದಾರೆ.

ಅಕ್ರಮವಾಗಿ ಗೋಸಾಗಾಟ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸರು ಶುಕ್ರವಾರ ರಾತ್ರಿ ಮದ್ದಡ್ಕದಲ್ಲಿ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ವಾಹನದಲ್ಲಿ ಎರಡು ದನಗಳು, ಒಂದು ಕರು, ಒಂದು ಹೋರಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಪೊಲೀಸರು ವಿಚಾರಿಸಿದ ವೇಳೆ ಆರೋಪಿಗಳು ಯಾವುದೇ ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾಗಿದ್ದಾರೆ. ಹೀಗಾಗಿ ಆರೋಪಿಗಳನ್ನು ಬಂಧಿಸಿ, ದನ, ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ