ನಾನು ಬೆಂಗಳೂರಿನಲ್ಲೇ ಇದ್ದೇನೆ | ಡೆಲಿವರಿ ಬಾಯ್ ಜೊತೆ ಕಿರಿಕ್ ಮಾಡಿದ್ದ ಹಿತೇಶಾ ಚಂದ್ರಾನೀ ಪೋಸ್ಟ್
ಬೆಂಗಳೂರು: ಝೊಮೆಟೋ ಫುಡ್ ಡೆಲಿವರಿ ಬಾಯ್ ತನಗೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೊಡ್ಡ ಸುದ್ದಿಯಾಗಿರುವ ಮಾಡೆಲ್ ಹಿತಾಶಾ ಚಂದ್ರಾನೀ ಇದೀಗ ಮತ್ತೆ ಪೋಸ್ಟ್ ಹಾಕಿದ್ದು, ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಲಾಗಿದ್ದೇನೆ ಎಂದು ಇಮ್ಮ ಇನ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.
ಡೆಲಿವರಿ ಬಾಯ್ ತನಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಿತೇಶಾ ಚಂದ್ರಾನೀ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದರು. ಇದಾದ ಬಳಿಕ ಘಟನೆಯ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ವಿರುದ್ಧ ದಾಳಿ, ಅವಮಾನ, ಕ್ರಿಮಿನಲ್ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಹಿತೇಶಾ ಇದೀಗ ಮತ್ತೆ ಪೋಸ್ಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಸೆಲೆಬ್ರೆಟಿಗಳು ಈ ಘಟನೆಗೆ ನಾನೇ ಕಾರಣ ಎಂದು ಹೇಳಿದ್ದಾರೆ. ಇವರು ನಾನು ನೋಡಿದ ಜನರೇನಾ ಎಂದು ನನಗೆ ಅನ್ನಿಸಿತು. ನಾನು ನನ್ನ ಜೀವನವನ್ನು ಮತ್ತು ಗೌರವವನ್ನು ಯಾವುದೇ ಅಪಾಯಕ್ಕೆ ಒಳಪಡಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಪ್ರಕರಣ ಮುಗಿಯುವವರೆಗೆ ಯಾರೂ ಈ ಬಗ್ಗೆ ಹೇಳಿಕೆ ನೀಡಬಾರದು ಎಂದು ವಿನಂತಿಸಿದ್ದಾರೆ.
ಇನ್ನೂ ತಾನು ಪ್ರಕರಣ ದಾಖಲಾಗುತ್ತಿದ್ದಂತೆಯೇ ಊರು ಬಿಟ್ಟು ಹೋಗಿದ್ದೇನೆ ಎನ್ನುವುದು ಗಾಳಿ ಸುದ್ದಿ ಎಂದಿರುವ ಅವರು, ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ನನ್ನ ಸುರಕ್ಷತೆಯ ಬಗ್ಗೆ ತಾನು ಚಿಂತೆಗೊಳಗಾಗಿದ್ದೇನೆ ಎಂದು ಹೇಳಿದ್ದಾರೆ.