ಸಚಿವ ಸುಧಾಕರ್ ಗನ್ ಮ್ಯಾನ್ ಮತ್ತು ಕಾರು ಡ್ರೈವರ್ ನಡುವೆ ಮಾರಾಮಾರಿ
19/03/2021
ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ಅವರ ಮನೆಯ ಮುಂದೆ ಗನ್ ಮ್ಯಾನ್ ಹಾಗೂ ಖಾಸಗಿ ಡ್ರೈವರ್ ನಡುವೆ ಮಾರಾಮಾರಿ ನಡೆದು ಕೈಕೈ ಮಿಲಾಯಿಸಿಕೊಂಡಿರುವ ಘಟನೆ ಇಂದು ನಡೆದಿದೆ.
ಘಟನೆಯಲ್ಲಿ ಸಚಿವರ ಮನೆಯ ಖಾಸಗಿ ಕಾರು ಚಾಲಕನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗನ್ ಮ್ಯಾನ್ ತಿಮ್ಮಯ್ಯ ಎಂಬವರು ಕಾರು ಚಾಲಕ ಸೋಮಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಟೀ ಮಾರುವ ವ್ಯಕ್ತಿಯೊಬ್ಬರಿಗೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಈ ವಿಚಾರವನ್ನು ಕಾರು ಚಾಲಕ ಸೋಮಶೇಖರ್ ಸಚಿವ ಸುಧಾಕರ್ ಅವರಿಗೆ ತಿಳಿಸಿದ್ದ ಎಂದು ಹೇಳಲಾಗಿದೆ. ಈ ಕಾರಣವನ್ನು ಮುಂದಿಟ್ಟಕೊಂಡು ಇಂದು ತಿಮ್ಮಯ್ಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ಈ ಹಲ್ಲೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, ಗನ್ ಮ್ಯಾನ್ ತಿಮ್ಮಯ್ಯನನ್ನು ಮತ್ತೆ ಮಾತೃ ಸಂಸ್ಥೆಗೇ ಕಳುಹಿಸುವುದಾಗಿ ತಿಳಿಸಿದ್ದಾರೆ.