ಗಂಡನ ಎದುರೇ ಮಹಿಳೆಯ ಸರಗಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

ತಮಿಳುನಾಡಿನ ಮಧುರೈನಲ್ಲಿ ಸರವನ್ನು ಕಸಿದುಕೊಳ್ಳುವ ಪ್ರಯತ್ನದ ವೇಳೆ ಮಹಿಳೆಯೊಬ್ಬರನ್ನು ಹಲವಾರು ಮೀಟರ್ ಗಳವರೆಗೆ ಹಿಂಸಾತ್ಮಕವಾಗಿ ಎಳೆದೊಯ್ದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಂಥಾಡಿ ನಿವಾಸಿಗಳಾದ ಮಂಜುಳಾ ಮತ್ತು ಆಕೆಯ ಪತಿ ದ್ವಾರಕನಾಥ್ ಅವರು ಮತ್ತುತವಾಣಿಯಲ್ಲಿ ದೀಪಾವಳಿ ಶಾಪಿಂಗ್ ಗಾಗಿ ಹೊರಟಿದ್ದಾಗ ಈ ಘಟನೆ ನಡೆದಿದೆ.
ದ್ವಾರಕನಾಥ್ ತನ್ನ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ, ಯಮಹಾ ಆರ್15 ಬೈಕ್ನಲ್ಲಿದ್ದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ದಂಪತಿ ಬಳಿಗೆ ಬಂದಿದ್ದಾರೆ. ಮಂಜುಳಾರ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಳ್ಳಲು ಈ ರೀತಿ ಕೃತ್ಯವೆಸಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆಯ ಭಯಾನಕ ದೃಶ್ಯವನ್ನು ಸೆರೆಹಿಡಿದಿದೆ. ದ್ವಾರಕಾನಾಥ್ ತನ್ನ ಬೈಕನ್ನು ನಿಲ್ಲಿಸಿದಾಗ, ಮಂಜುಳಾ ಬೈಕ್ ನಿಂದ ಇಳಿಯುವ ವೇಳೆ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮಂಜುಳಾ ಅವರ ಸರಪಳಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಸರ ತಕ್ಷಣವೇ ಮುರಿಯಲಿಲ್ಲ.
ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth