ಅಟ್ರಾಸಿಟಿ ಕೇಸ್ ನಲ್ಲಿ ದೇಶದ ಮಟ್ಟಿಗೆ ಅತಿದೊಡ್ಡ ಶಿಕ್ಷೆ ಪ್ರಮಾಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ: ಆಗಸ್ಟ್ 28, 2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಜಾತಿಯ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆಸಿ, ಮನೆಗಳನ್ನ ಧ್ವಂಸಗೊಳಿಸಿದ್ದ ಪಾಪಿಗಳಿಗೆ ಕೋರ್ಟ್ ಇಡೀ ದೇಶವೇ ತಿರುಗಿ ನೀಡುವಂತಹ ಶಿಕ್ಷೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದೆ.
ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಗೊಂಡಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿಯ 101 ಅಪರಾಧಿಗಳ ಪೈಕಿ 98 ಮಂದಿಗೆ 9 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಚಂದ್ರಶೇಖರ್ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಉಳಿದ ಮೂವರಿಗೆ ಕಠಿಣ ಶಿಕ್ಷೆ, ತಲಾ 2 ಸಾವಿರ ದಂಡ ವಿಧಿಸಿದೆ. 117 ಮಂದಿಯ ಪೈಕಿ 16 ಆರೋಪಿಗಳು ಮೃತಪಟ್ಟಿದ್ದಾರೆ. 101 ಆರೋಪಿಗಳ ವಿರುದ್ಧ ಇರುವ ದಾಖಲೆ ಪರಿಶೀಲನೆ ಮಾಡಲಾಗಿದ್ದು, ಅಕ್ಟೋಬರ್ 21ರಂದು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ನ್ಯಾಯಧೀಶರಾದ ಚಂದ್ರಶೇಖರ್ ರಿಂದ ಮಹತ್ವದ ತೀರ್ಪು ನೀಡಿದ್ದಾರೆ. ತಡರಾತ್ರಿ ಬಿಗಿ ಬಂದೋಬಸ್ತ್ನಲ್ಲಿ ಎಲ್ಲಾ ಅಪರಾಧಿಗಳನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಅಟ್ರಾಸಿಟಿ ಕೇಸ್ ಎಂದರೆ ಸಮಾಜದಲ್ಲಿ ಭಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೋರ್ಟ್ ನೀಡಿದ ತೀರ್ಪು ಜಾತಿ ಹೆಸರಿನಲ್ಲಿ ದೌರ್ಜನ್ಯ ನಡೆಸುವ ಅನಾಗರಿಕರಿಗೆ ನೀಡಿದ ಎಚ್ಚರಿಕೆಯಾಗಿದೆ. ಇನ್ನಾದರೂ ಜಾತಿ ಪೀಡೆಗಳ ಮನಸ್ಥಿತಿ ಬದಲಾಗಲಿ, ಇಲ್ಲವಾದರೆ ದೇಶದ ಕಾನೂನು, ನ್ಯಾಯಾಲಯ ನಿಮಗೆ ತಕ್ಕ ಶಿಕ್ಷೆ ನೀಡುವುದು ನಿಶ್ಚಿತ ಎನ್ನುವ ಸಂದೇಶವನ್ನು ಸಾರಿದಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: