ಪ್ರೇಮಿಗಳನ್ನ ದೂರ ಮಾಡ್ತೀಯಾ?: ಸಿನಿಮಾದ ವಿಲನ್ ಗೆ ಥಿಯೇಟರ್ ನಲ್ಲಿ ಹಲ್ಲೆ ನಡೆಸಿದ ಮಹಿಳೆ! - Mahanayaka

ಪ್ರೇಮಿಗಳನ್ನ ದೂರ ಮಾಡ್ತೀಯಾ?: ಸಿನಿಮಾದ ವಿಲನ್ ಗೆ ಥಿಯೇಟರ್ ನಲ್ಲಿ ಹಲ್ಲೆ ನಡೆಸಿದ ಮಹಿಳೆ!

love reddy
26/10/2024

ಹೈದರಾಬಾದ್: ಸಿನಿಮಾದಲ್ಲಿ ನಾಯಕ ನಾಯಕಿಯನ್ನು ದೂರ ಮಾಡಿದ್ದಕ್ಕೆ ಕಲಾವಿದನಿಗೆ ನಿಜ ಜೀವನದಲ್ಲಿ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ನ ಥಿಯೇಟರ್ ನಲ್ಲಿ ನಡೆದಿದೆ.


Provided by

ತೆಲುಗಿನ ‘ಲವ್ ರೆಡ್ಡಿ’ ಸಿನಿಮಾದಲ್ಲಿ ಕನ್ನಡ ನಟ ಎನ್.ಟಿ.ರಾಮಸ್ವಾಮಿ ನಟಿಸಿದ್ದರು. ಹೈದರಾಬಾದ್ನ ನಿಜಾಂಪೇಟ್ ನಲ್ಲಿರುವ ಜಿಪಿಆರ್ ಮಾಲ್ ನಲ್ಲಿ ಈ ಸಿನಿಮಾ ಪ್ರದರ್ಶನಗೊಂಡಿತ್ತು. ಈ ಪ್ರದರ್ಶನದಲ್ಲಿ ಚಿತ್ರ ತಂಡ ಕೂಡ ಸಿನಿಮಾ ವೀಕ್ಷಣೆ ಮಾಡಿತ್ತು. ಚಿತ್ರ ಮುಗಿದ ಬಳಿಕ ವೇದಿಕೆಗೆ ಚಿತ್ರ ತಂಡ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

ಕ್ಲೈಮ್ಯಾಕ್ಸ್ ಸೀನ್ ನಲ್ಲಿ ನಾಯಕಿಯ ತಂದೆ ಪಾತ್ರಧಾರಿ ರಾಮಸ್ವಾಮಿ ಪ್ರೇಮಿಗಳನ್ನು ದೂರ ಮಾಡುವ ಸನ್ನಿವೇಶವಿದೆ. ಈ ದೃಶ್ಯವನ್ನು ಕಂಡು ತೀವ್ರವಾಗಿ ಕೋಪಗೊಂಡಿದ್ದ ಮಹಿಳೆ, ವೇದಿಕೆಯಲ್ಲಿ ತಂದೆ ಪಾತ್ರಧಾರಿ ರಾಮಸ್ವಾಮಿಯನ್ನು ಕಂಡು ವೇದಿಕೆಗೆ ನುಗ್ಗಿ ಹೊಡೆದಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ