ಸಿನಿಮಾ ಹಾಲ್ ಗೆ ರಾತ್ರಿ ನುಗ್ಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ದಂಪತಿ | ವಿಡಿಯೋ ವೈರಲ್!
ಮಾಸ್ಕೋ: ಸಿನಿಮಾ ಮಂದಿಕ್ಕೆ ರಾತ್ರೋ ರಾತ್ರಿ ನುಗ್ಗಿದ ದಂಪತಿ ಪಾಪ್ ಕಾರ್ನ್ ಕದ್ದು ತಿಂದು, ಅಲ್ಲಿರುವ ಪಾನೀಯಗಳನ್ನು ಕುಡಿದು ಬಳಿಕ ಸಿನಿಮಾ ಮಂದಿರದ ಹಾಲ್ ಗೆ ನುಗ್ಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಷ್ಯಾದ ಸೇಂಟ್ ಪೀಟರ್ ಬರ್ಗ್ನ ಸೌಥ್ ಪೋಲ್ ಶಾಪಿಂಗ್ ಕೇಂದ್ರದಲ್ಲಿರುವ ಕಿನೊಗ್ರಾಡ್ ಸಿನಿಮಾ ಮಂದಿರಕ್ಕೆ ಮಾರ್ಚ್ 18ರಂದು ಈ ದಂಪತಿ ನುಗ್ಗಿದ್ದಾರೆ. ಬಳಿಕ ಫುಡ್ ಕೌಂಟರ್ ಗೆ ನುಗ್ಗಿ ಪಾಪ್ ಕಾರ್ನ್ ಕದ್ದಿದ್ದು, ಸ್ಕ್ರೀನಿಂಗ್ ರೂಮ್ ಗೆ ತೆರಳಿ ಅಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ.
ಮರುದಿನ ಬೆಳಗ್ಗೆ ದಂಪತಿಯು ಭದ್ರತಾ ಸಿಬ್ಬಂದಿಗೆ ತಿಳಿಯದಂತೆ ಸಿನಿಮಾ ಕೇಂದ್ರದಿಂದ ಹೊರಗೆ ಹೋಗಿದ್ದು, ತಾವು ಹೊರ ಹೋಗುವುದಕ್ಕೂ ಮೊದಲು ಸಿನಿಮಾ ಕೇಂದ್ರವನ್ನು ಅವರು ಸ್ವಚ್ಛಗೊಳಿಸಿದ್ದಾರೆ. ಈ ವಿಚಾರ ತಿಳಿಸಿದ ಸಿನಿಮಾ ಮಂದಿರದವರು ದಂಪತಿ ವಿರುದ್ಧ ಕ್ರಮಕೈಗೊಳ್ಳುವ ಬದಲು ಅವರಿಗೆ ಉಚಿತವಾಗಿ ಟಿಕೆಟ್ ನೀಡಿದ್ದಾರೆ. ದಂಪತಿಯ ಈ ಕೆಲಸಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.