ಫ್ಯಾಸಿಸಂ ವಿರೋಧಿ ವಿಶ್ವ ಸಂಸದೀಯ ವೇದಿಕೆ: ಸಿಪಿಐಎಂ ರಾಜ್ಯಸಭಾ ಸಂಸದರಿಗೆ ಭಾಗವಹಿಸಲು ಅನುಮತಿ ಇಲ್ಲ!
ದಕ್ಷಿಣ ಅಮೆರಿಕದ ವೆನಿಜುವೆಲಾ ಸರ್ಕಾರ ಆಯೋಜಿಸಿದ್ದ ‘ಫ್ಯಾಸಿಸಂ ವಿರೋಧಿ ವಿಶ್ವ ಸಂಸದೀಯ ವೇದಿಕೆ’ಯಲ್ಲಿ ಪಾಲ್ಗೊಳ್ಳಲು ಸಿಪಿಐಎಂ ರಾಜ್ಯಸಭಾ ಸಂಸದ ವಿ. ಶಿವದಾಸನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮತಿ ನಿರಾಕರಿಸಿದೆ. ನವೆಂಬರ್ 4 ಮತ್ತು 5 ರಂದು ಕ್ಯಾರಕಾಸ್‌ನಲ್ಲಿ ನಡೆಯಲಿರುವ ‘ಫ್ಯಾಸಿಸಂ ವಿರೋಧಿ ವಿಶ್ವ ಸಂಸದೀಯ ವೇದಿಕೆ’ಯಲ್ಲಿ ವಿಶ್ವದಾದ್ಯಂತ 300 ಸಂಸದರು ಭಾಗವಹಿಸುವ ನಿರೀಕ್ಷೆಯಿದೆ.
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅನುಮತಿಯ ನಂತರ ಗೃಹ ಸಚಿವಾಲಯ ಒಪ್ಪಿಗೆ ನೀಡಿದ ಹೊರತಾಗಿಯೂ ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಸಂಸದ ಶಿವದಾಸನ್, “ಎಫ್‌ಸಿಆರ್‌ಎ ಅನುಮತಿ ನೀಡಿದ್ದು ಇದರಿಂದ ಸರ್ಕಾರಕ್ಕೆ ಬೇರೆ ಯಾವುದೂ ಸಮಸ್ಯೆ ಇಲ್ಲ ಎಂದು ತೋರಿಸುತ್ತದೆ. ಆದರೂ, ಯಾವುದೇ ಕಾರಣ ಉಲ್ಲೇಖಿಸದೆ, ವಿದೇಶಾಂಗ ಸಚಿವಾಲಯ ತನ್ನ ಅನುಮತಿ ನಿರಾಕರಣೆ ಪತ್ರದಲ್ಲಿ ‘ರಾಜಕೀಯ ದೃಷ್ಟಿ ಕೋನದಿಂದ ಅನುಮತಿ ನಿರಾಕರಿಸಲಾಗಿದೆ’ ಎಂದು ಹೇಳಿದೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾದ ಆಮಂತ್ರಣ ಪತ್ರದಲ್ಲಿ ವೆನಿಜುವೆಲಾದ ಉಪಾಧ್ಯಕ್ಷ ಪೆಡ್ರೊ ಇನ್‌ಫಾಂಟೆ ಅವರು ಕಾರ್ಯಕ್ರಮಕ್ಕಾಗಿ ಸಂಸದ ವಿ. ಶಿವದಾಸನ್‌ಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj