ಕೈಕೊಟ್ಟ ಪ್ರೇಮಿಯ ಮೇಲೆ ಸೇಡು ತೀರಿಸಲು ಸೂಪ್ ನಲ್ಲಿ ವಿಷ ಹಾಕಿದ ಯುವತಿ: ಐವರು ಸಾವು
ನೈಜೀರಿಯಾ: ಮಾಜಿ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ 16 ವರ್ಷದ ಬಾಲಕಿಯೊಬ್ಬಳು ಸೂಪ್ ನಲ್ಲಿ ವಿಷ ಹಾಕಿ ಐವರ ಸಾವಿಗೆ ಕಾರಣವಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ನೈಜೀರಿಯಾದ ಎಡೋ ರಾಜ್ಯದ ಮನೆಯೊಂದರ ಕೊಠಡಿಯಲ್ಲಿ 5 ಮೃತ ದೇಹಗಳು ಪತ್ತೆಯಾಗಿವೆ. ಈ ಘಟನೆಯ ಅಸಲಿ ವಿಚಾರ ಹೊರ ಬಂದಾಗ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
16 ವರ್ಷದ ಬಾಲಕಿ ಆಯಿಷಾ ಸುಲೇಮಾನ್ ನಿಂದ ಆಕೆಯ ಪ್ರೇಮಿ ದೂರವಾಗಿದ್ದ. ಇದರಿಂದ ಆಕೆ ತೀವ್ರವಾಗಿ ನೊಂದಿದ್ದಳು. ಅಲ್ಲದೇ ತನ್ನಿಂದ ದೂರವಾದ ಆತನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದ್ದಳು.
ಆಕೆ ತನ್ನ ಪ್ರೇಮಿಯನ್ನು ಮಾತ್ರವೇ ಕೊಲ್ಲಲು ಮುಂದಾಗಿದ್ದಳು. ಆತನಿಗೆ ಸೂಪ್ ನಲ್ಲಿ ವಿಷ ಬೆರೆಸಿ ನೀಡಿದ್ದಳು. ಆದರೆ ಆತ ತನ್ನ ಸಹೋದರರು ಮತ್ತು ಬಾಲಕಿ ಸೇರಿದಂತೆ ಮೂವರು ಸ್ನೇಹಿತರಿಗೆ ಸೂಪ್ ಹಂಚಿಕೊಂಡು ತಾನೂ ಸೇವನೆ ಮಾಡಿದ್ದ.
ಸೂಪ್ ಸೇವನೆ ಮಾಡಿದ ಐವರು ಕೂಡ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ನೈಜೀರಿಯಾ ಸೇನೆ ಯುವತಿಯನ್ನು ಬಂಧಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಸ್ವತಃ ಯುವತಿಯೇ ವಿಷ ಸೇರಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97