ದಲಿತ ಸಂಘರ್ಷ ಸಮಿತಿವತಿಯಿಂದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಹಾಗೂ ಕಾರ್ಯಕರ್ತರ ಕ್ರೀಡಾಕೂಟ ಕಾರ್ಯಕ್ರಮ
ಮಂಗಳೂರು: ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊಫೆಸರ್ ಬಿ.ಕೆ.ಬಣ ತಾಲೂಕು ಸಮಿತಿ ಮಂಗಳೂರು ಇದರ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಹಾಗೂ ಕಾರ್ಯಕರ್ತರ ಕ್ರೀಡಾಕೂಟ ಎಕ್ಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಬೆಳಿಗ್ಗೆ 9ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷ್ಣಾನಂದ ಡಿ.(ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರು, ಅಧ್ಯಕ್ಷರು ಪರಿವರ್ತನ ಕೋ ಆಪರೇಟಿವ್ ಸೊಸೈಟಿ ಬಜ್ಪೆ.)ಮಾತಾನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆ, ಕ್ರೀಡೆಯಲ್ಲಿ ಭಾಗವಹಿಸುವಂತಿರಬೇಕು, ಭೌತಿಕ ಬೆಳವಣಿಗೆ ಇಂತಹ ಕಾಯ೯ಕ್ರಮವನ್ನು ಆಯೋಜನೆ ಮಾಡಿದ್ದು ಸ್ವಾಗತಾರ್ಹ ಎಂದು ಹೇಳುತ್ತ ತಾಲೂಕು ಸಮಿತಿಗೆ ಅಭಿನಂದನೆ ತಿಳಿಸಿ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಶುಭಹಾರೈಸಿದರು.
ಸಭಾಧ್ಯಕ್ಷತೆ ರಾಘವೇಂದ್ರ ತಾಲೂಕು ಸಂಚಾಲಕರು ಮಂಗಳೂರು)ಅತಿಥಿಗಳಾಗಿ ಸದಾಶಿವ ಪಡುಬಿದ್ರೆ (ದಸಂಸ ಜಿಲ್ಲಾ ಸಂಚಾಲಕರು), ರಘು ಕೆ. ಎಕ್ಕಾರು (ಜಿಲ್ಲಾ ಸಂಘಟನಾ ಸಂಚಾಲಕರು), ರುಕ್ಕಯ ಅಮಿನ್ (ತಾಲೂಕು ಸಂಘಟನಾ ಸಂಚಾಲಕರು), ಕೀರ್ತಿ ಪಡುಬಿದ್ರೆ, ಸತೀಶ್ ಸಿದ್ದಾರ್ಥ್ ನಗರ, ಗಣೇಶ್ ಕೆಂಚಗುಡ್ಡೆ, ಜಯಪ್ರಕಾಶ್ ಪುನರೂರು, ಲಿಂಗಪ್ಪ ಕುಂದರ್, ಉಪಸ್ಥಿತರಿದ್ದರು. ಸೀತಾ ಪೇಜಾವರ ಸ್ವಾಗತಿಸಿದರು. ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರೂಪಣೆ ಮಾಡಿ ವಂದನೆಗೈದರು.
ಸಂಜೆ ಸುಮಾರು 4 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರೆ, ಇಂದು ನಡೆದ ಎಲ್ಲಾ ಸ್ಪರ್ಧೆಯನ್ನು ನೋಡಿದ್ದೇನೆ. ವಿದ್ಯಾರ್ಥಿಗಳು, ವಿಶೇಷವಾಗಿ ಕಾಯ೯ಕತ೯ರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ, ಮಕ್ಕಳು ಅನ್ಯ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಬಿಟ್ಟು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ತಾವುಗಳು ಮುಕ್ತವಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಕೂಡ ಅಂಬೇಡ್ಕರ್ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಎಲ್ಲರನ್ನು ಗೌರವಿಸುವ ಸಂಸ್ಕೃತಿಯನ್ನು ಕಳುಹಿಸಿಕೊಡಬೇಕು ಮತ್ತು ಅದಕ್ಕಾಗಿ ಸಮಾಜಘಾತುಕ ಶಕ್ತಿಗಳಿಂದ ದೂರ ಇರುವಂತೆ ಮಕ್ಕಳನ್ನು ಬೆಳೆಸಿ ಸಂಘಟನೆಯಿಂದ ನಡೆಸುವ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅಗತ್ಯಬೇಕು. ಮಾನಸಿಕವಾಗಿ ದೈಹಿಕವಾಗಿ ಸದೃಡವಾಗಬೇಕು ಎಂದು ತಿಳಿಸಿದರು.
ಮಂಗಳೂರು ತಾಲೂಕು ಸಮಿತಿಯನ್ನು ಅಭಿನಂದಿಸಿದ ಅವರು, ಇನ್ನೂ ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ನಿಕಟಪೂರ್ವ ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು, ಹಾಗೂ ಹಿರಿಯ ನಾಯಕರಾದ ರುಕ್ಕಯ ಅಮಿನ್ ಇವರುಗಳನ್ನು ಸನ್ಮಾನಿಸಲಾಯಿತು.
ಸಭಾಧ್ಯಾಕ್ಷತೆ ರಾಘವೇಂದ್ರ (ತಾಲೂಕು ಸಂಚಾಲಕರು ಮಂಗಳೂರು) ಅಥಿತಿಗಳಾಗಿ ಮಾಧವ ಅಮೀನ್ ನಿಸರ್ಗ, ರಘು ಕೆ. ಎಕ್ಕಾರು, ಕೃಷ್ಣಾನಂದ ಡಿ., ಸಂಕಪ್ಪ ಕಾಂಚನ್, ಗಂಗಾಧರ ಕೋಟ್ಯಾನ್, ರಮೇಶ್ ಸುವರ್ಣ ಕರಂಬಾರು, ಗಣೇಶ್ ಕೆಂಚಗುಡ್ಡೆ, ಸೀತಾ ಪೇಜಾವರ, ಗೀತ ಕರಂಬಾರು ಹಾಗೂ ದೊಂಬಯ್ಯ ಕಟೀಲು, ಸುರೇಶ್ ಪೇಜಾವರ, ಗೋಪಾಲ ಬಾರಿಂಜ, ಹರೀಶ್ ಎಂ ಬಿ.ಗಣೇಶ್ ಕರಂಬಾರು, ಚಂದ್ರಶೇಖರ ಸಿದ್ಧಾರ್ಥ ನಗರ ಉಪಸ್ಥಿತರಿದ್ದರು. ರುಕ್ಕಯ ಅಮೀನ್ ಸ್ವಾಗತಿಸಿ, ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: