ವಿವಾದಾತ್ಮಕ ಕಾನೂನಿಗೆ ಇಸ್ರೇಲ್ ಪಾರ್ಲಿಮೆಂಟ್ ಒಪ್ಪಿಗೆ: ಫೆಲೆಸ್ತೀನೇ ಟಾರ್ಗೆಟ್! - Mahanayaka

ವಿವಾದಾತ್ಮಕ ಕಾನೂನಿಗೆ ಇಸ್ರೇಲ್ ಪಾರ್ಲಿಮೆಂಟ್ ಒಪ್ಪಿಗೆ: ಫೆಲೆಸ್ತೀನೇ ಟಾರ್ಗೆಟ್!

08/11/2024

ಇಸ್ರೇಲಿನಲ್ಲಿ ಆಕ್ರಮಣ ನಡೆಸುವ ಇಸ್ರೇಲಿನ ಫೆಲೆಸ್ತೀನಿ ಕುಟುಂಬವನ್ನು ದೇಶಭ್ರಷ್ಟಗೊಳಿಸುವ ಕಾನೂನಿಗೆ ಇಸ್ರೇಲಿನ ಪಾರ್ಲಿಮೆಂಟ್ ಅಂಗೀಕಾರ ನೀಡಿದೆ. ಹೀಗೆ ಆಕ್ರಮಣ ನಡೆಸುವವರ ಕುಟುಂಬವನ್ನು 20 ವರ್ಷಗಳ ಕಾಲ ದೇಶಭ್ರಷ್ಟಗೊಳಿಸಲು ಈ ಕಾನೂನಿನ ಪ್ರಕಾರ ಅವಕಾಶವಿದೆ. ಗಾಝಾ ಅಥವಾ ಇನ್ನಿತರ ಪ್ರದೇಶಗಳಿಗೆ ಅವರನ್ನು ದೇಶ ಭ್ರಷ್ಟ ಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಆಕ್ರಮಣ ನಡೆಸಿದ ವ್ಯಕ್ತಿಗಳ ತಂದೆ ತಾಯಂದಿರು, ಸಹೋದರ ಸಹೋದರಿಯರು, ಮಕ್ಕಳು ಮತ್ತು ಪತ್ನಿಯಂದಿರನ್ನು ಹೀಗೆ ದೇಶಭ್ರಷ್ಟಗೊಳಿಸಲಾಗುವುದು ಎಂದು ನಿಯಮದಲ್ಲಿ ಹೇಳಲಾಗಿದೆ.

ಭಯೋತ್ಪಾದನೆಯನ್ನು ಬೆಂಬಲಿಸಿದ್ದಾರೆ , ಅದರ ಪರವಾಗಿ ವಾದಿಸಿದ್ದಾರೆ, ಅದಕ್ಕೆ ಪ್ರೋತ್ಸಾಹಿಸಿದ್ದಾರೆ ಎಂಬೆಲ್ಲಾ ಆರೋಪಗಳನ್ನು ಹೊರಿಸಿ ದೇಶ ದೇಶಭ್ರಷ್ಟ ಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಭಯೋತ್ಪಾದನಾ ದಾಳಿ ನಡೆಯಲಿದೆ ಎಂದು ಗೊತ್ತಿದ್ದೂ ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ಹೊರಿಸಿಯೂ ದ್ದೇಶ ಭ್ರಷ್ಟ ಗೊಳಿಸಬಹುದು ಎಂದು ತಿಳಿದುಬಂದಿದೆ.

ಇಸ್ರೇಲ್ ಪಾರ್ಲಿಮೆಂಟ್ ನಲ್ಲಿ ಈ ನಿಯಮದ ಪರ ಅರವತ್ತೊಂದು ಮಂದಿ ಸಂಸದರು ಮತ ಚಲಾಯಿಸಿದರೆ 41 ಮಂದಿ ಇದನ್ನು ವಿರೋಧಿಸಿದರು. ಇಸ್ರೇಲಿನಲ್ಲಿರುವ ಫೆಲೆಸ್ತೀನಿ ನಾಗರಿಕರನ್ನು ಏಳು ವರ್ಷಗಳಿಂದ 15 ವರ್ಷಗಳವರೆಗೆ ದೇಶಭ್ರಷ್ಟ ಗೊಳಿಸಬಹುದು ಮತ್ತು ಉಳಿದವರನ್ನು 10 ರಿಂದ 20 ವರ್ಷಗಳವರೆಗೆ ದೇಶಭ್ರಷ್ಟ ಗೊಳಿಸಬೇಕು ಎಂದು ನಿಯಮದಲ್ಲಿ ಹೇಳಲಾಗಿದೆ.
ಆದರೆ ಈ ನಿಯಮವು ನ್ಯಾಯಾಲಯದಲ್ಲಿ ನಿಲ್ಲಲಾರದು ಮತ್ತು ಈ ಹಿಂದಿನ ತೀರ್ಪಿನ ಆಧಾರದಲ್ಲಿ ಸುಪ್ರೀಂ ಕೋರ್ಟು ಈ ನಿಯಮವನ್ನ ಅಮಾನ್ಯಗೊಳಿಸಬಹುದು ಎಂಬ ಅಭಿಪ್ರಾಯವೂ ಇದೆ.




ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

 

ಇತ್ತೀಚಿನ ಸುದ್ದಿ