ಬ್ಯಾನ್: ಸ್ವಿಜರ್ ಲ್ಯಾಂಡ್ ನಲ್ಲಿ ಮುಸ್ಲಿಂ ಮಹಿಳೆಯರಿಗೆ ನಕಾಬ್ ಧಾರಣೆ ನಿಷೇಧ
ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಧರಿಸುವ ನಕಾಬ್ ಅಥವಾ ಮುಖ ವಸ್ತ್ರವನ್ನು ನಿಷೇಧಿಸಲು ಸ್ವಿಜರ್ ಲ್ಯಾಂಡ್ ಮುಂದಾಗಿದೆ. 2021ರಲ್ಲಿ ಈ ಕುರಿತಂತೆ ಸ್ವಿಜರ್ ಲ್ಯಾಂಡ್ ನಲ್ಲಿ ಜನ ಮತಗಣನೆ ನಡೆದಿತ್ತು. 2025 ಜನವರಿ ಒಂದರಿಂದ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಸಮುದಾಯದಿಂದ ಈ ಜನಮತಗಣನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ 51% ಮಂದಿ ನಕಾಬ್ ಗೆ ನಿಷೇಧ ವಿಧಿಸುವುದಕ್ಕೆ ಬೆಂಬಲ ಸೂಚಿಸಿದ್ದರು. ಈ ನಿಯಮ ಜಾರಿಗೆ ಬರುವುದರೊಂದಿಗೆ ನಕಾಬ್ ನಿಯಮವನ್ನು ಉಲ್ಲಂಘಿಸುವವರಿಗೆ ಸಾವಿರ ಸ್ವಿಸ್ ಫ್ರಾಂಕ್ ದಂಡ ವಿಧಿಸಲಾಗುವುದು.
ಹಾಗಂತ ಎಲ್ಲಾ ಸಂದರ್ಭಗಳಲ್ಲಿಯೂ ಈ ನಿಷೇಧ ಅನ್ವಯವಾಗುವುದಿಲ್ಲ. ಆರೋಗ್ಯ ಸಂಬಂಧಿ ಕಾರಣಗಳಿಗಾಗಿ, ಪರಂಪರಾಗತ ಆಚಾರ ವಿಚಾರಗಳಿಗಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ, ಸಾರ್ವಜನಿಕ ಸಭೆಗಳಲ್ಲಿ ಮತ್ತು ಪ್ರತಿಭಟನೆಗಳ ವೇಳೆ ಮುಖ ಮುಚ್ಚುವ ವಸ್ತ್ರ ಧರಿಸುವುದಕ್ಕೆ ಅನುಮತಿ ಇದೆ.
ನಕಾಬನ್ನು ನಿಷೇಧಿಸುವ ಇತ್ತೀಚಿನ ರಾಷ್ಟ್ರಗಳಲ್ಲಿ ಸ್ವಿಜರ್ಲ್ಯಾಂಡ್ ಸೇರಿಕೊಂಡಿದೆ. ಇದಕ್ಕಿಂತ ಮೊದಲು ಟುನಿಷಿಯ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಫ್ರಾನ್ಸ್, ಬೆಲ್ಜಿಯಂ ಸಹಿತ ಹದಿನಾರು ರಾಷ್ಟ್ರಗಳು ನಕಾಬನ್ನು ನಿಷೇಧಿಸಿದ್ದವು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj