ಸರ್ಕಾರಿ ಶಾಲೆಯಲ್ಲಿ ಬಾಂಬ್ ಸ್ಫೋಟ: ವಿದ್ಯಾರ್ಥಿಗಳಿಂದಲೇ ಕೃತ್ಯ?
ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಐದು ದಿನಗಳ ಹಿಂದೆ ಬಾಂಬ್ ಒಂದು ಸ್ಪೋಟಗೊಂಡಿದೆ. ವಿಜ್ಞಾನ ಶಿಕ್ಷಕಿಯನ್ನು ಗುರಿಯಾಗಿರಿಸಿ ಶಾಲೆಯ ವಿದ್ಯಾರ್ಥಿಗಳೇ ಈ ಕೃತ್ಯ ಎಸಗಿದ್ದರು ಎಂಬುದು ಬೆಳಕಿಗೆ ಬಂದಿದೆ.
ಈ ವೇಳೆ ಶಿಕ್ಷಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಕ್ಷಣ ಇಲಾಖೆ, ಆರೋಪಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ. ಶಿಕ್ಷಕಿ ವಿದ್ಯಾರ್ಥಿಗಳನ್ನು ಕ್ಷಮಿಸಿ ಉದಾರತೆಯನ್ನು ಮೆರೆದಿದ್ದಾರೆ.
ತರಗತಿಯ 15 ಮಕ್ಕಳಲ್ಲಿ 13 ವಿದ್ಯಾರ್ಥಿಗಳು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ವಿದ್ಯಾರ್ಥಿ ಬಾಂಬ್ ತಯಾರಿಸಿದ್ದು, ಮತ್ತೊಬ್ಬ ಅದನ್ನು ಕುರ್ಚಿಯ ಕೆಳಗೆ ಇಟ್ಟಿದ್ದ. ಇದರ ಬೆನ್ನಲ್ಲೇ ಬೇರೊಂದು ವಿದ್ಯಾರ್ಥಿ ರಿಮೋಟ್‌ನಿಂದ ಬಟನ್ ಒತ್ತಿದ್ದ ಎಂಬ ಮಾಹಿತಿ ತನಿಖೆಯ ವೇಳೆ ಹೊರಬಂದಿದೆ.
ಮಕ್ಕಳನ್ನು ಶಾಲೆಯಿಂದ ತೆಗೆಯುವ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಥಳೀಯ ಶಿಕ್ಷಣಾಧಿಕಾರಿ ನರೇಶ್ ಮಹಾತ ಹೇಳಿದರು. ಆದರೆ ಮನೆಯವರು ಲಿಖಿತವಾಗಿ ಕ್ಷಮಾಪಣಾ ಪತ್ರ ನೀಡಿದ್ದಾರೆ. ಈ ಘಟನೆ ನಡೆದ ದಿನ ತರಗತಿಯಲ್ಲಿ 13 ಮಕ್ಕಳು ಇದ್ದರು, ಎಲ್ಲರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಅದೇ ವೇಳೆಗೆ ಮಹಿಳಾ ಶಿಕ್ಷಕಿ ಮಕ್ಕಳನ್ನು ಕ್ಷಮಿಸಿ ಮಕ್ಕಳ ಪಾಲಿಗೆ ಮಾದರಿ ಶಿಕ್ಷೆ ಶಿಕ್ಷಕಿ ಆಗಿದ್ದಾರೆ. , ಆದರೆ ಈಗ ಈ ವಿಷಯವನ್ನು ವಾರ್ನಿಂಗ್ ನೀಡಿ ಇತ್ಯರ್ಥಪಡಿಸಿದ್ದಾರೆ. ಬಾಂಬ್ ಸ್ಫೋಟದ ನಂತರ, ಕುರ್ಚಿಯ ಕೆಳಗೆ ರಂಧ್ರವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂಬುವುದು ನೆಮ್ಮದಿಯ ವಿಚಾರ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj