ತನ್ನ ಸ್ವಂತ ತಂದೆಗೆ ಮದ್ಯ ಕುಡಿಸಿ ನೀಚ ಕೃತ್ಯ ನಡೆಸಿದ ಯುವತಿ! | ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ
ಕೋಲ್ಕತಾ: ತನ್ನ ತಂದೆಯನ್ನು ರೆಸ್ಟೋರೆಂಟ್ ಗೆ ಊಟಕ್ಕೆ ಕರೆದುಕೊಂಡು ಹೋದ 22 ವರ್ಷ ವಯಸ್ಸಿನ ಯುವತಿಯೋರ್ವಳು, ತಂದೆಗೆ ಕಂಠಮಟ್ಟ ಮದ್ಯ ಕುಡಿಸಿ ನೀಚ ಕೃತ್ಯ ಎಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ರವಿವಾರ ತನ್ನ 56 ವರ್ಷದ ತಂದೆಯನ್ನು ಊಟಕ್ಕೆ ಕರೆದುಕೊಂಡು ಹೋದ ಯುವತಿ, ಕಂಠಮಟ್ಟ ಕುಡಿಸಿದ್ದಾಳೆ. ಬಳಿಕ ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತು ಮಾತನಾಡುತ್ತಿದ್ದ ವೇಳೆ ತಂದೆ ನಿದ್ದೆಗೆ ಜಾರಿದ್ದು, ಈ ವೇಳೆ ತಂದೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.
ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದರಿಂದ ಪೊಲೀಸರು ಯುವತಿಯನ್ನು ಸುಲಭವಾಗಿ ಬಂಧಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಯುವತಿಯ ಚಿಕ್ಕಪ್ಪ ದೂರು ನೀಡಿದ್ದಾರೆ.
ತಂದೆ ನನಗೆ ಚಿಕ್ಕ ವಯಸ್ಸಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದರು. ನನಗೆ ಮಾನಸಿಕ ಹಾಗೂ ದೈಹಿಕವಾಗಿ ಬಹಳಷ್ಟು ಹಿಂಸೆ ನೀಡುತ್ತಿದ್ದರು. ನನಗೆ ಮದುವೆ ಆದ ಬಳಿಕ ಅದು ನಿಂತು ಹೋಗಿತ್ತು. ಆದರೆ ತನ್ನ ಮದುವೆ ಸಂಬಂಧ ಮುರಿದು ತಾನು ಮತ್ತೆ ತಂದೆಯ ಬಳಿಗೆ ಬಂದಾಗ ಮತ್ತೆ ಚಿತ್ರಹಿಂಸೆ ಮುಂದುವರಿಸಿದ್ದಾರೆ. ಅದಕ್ಕಾಗಿ ತಂದೆಯನ್ನು ಹತ್ಯೆ ಮಾಡಿದ್ದೇನೆ ಎಂದು ಯುವತಿಯು ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: