ಕ್ರೈಸ್ತ ಸನ್ಯಾಸಿನಿಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ: ಅಮಿತ್ ಶಾ ಭರವಸೆ
ಕೊಟ್ಟಾಯಂ: ರೈಲಿನಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಬರವಸೆ ನೀಡಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಕಾಂಜಿರಾಪಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ರೈಸ್ತ ಸನ್ಯಾಸಿನಿಯರ ಮೇಲೆ ಹಲ್ಲೆ ನಡೆಸಿದವರನ್ನು ಆದಷ್ಟು ಶೀಘ್ರವೇ ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
ಮಾ.19ರಂದು ದೆಹಲಿ-ಒಡಿಶಾ ಮಾರ್ಗದ ಜಾನ್ಸಿಯಲ್ಲಿ ಬಜರಂಗದಳದ ಕಾರ್ಯಕರ್ತರು ಸೇಕ್ರೆಡ್ ಹಾರ್ಟ್ ಸಭೆಯ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ ನಡೆಸಿದ್ದು, ಮತಾಂತರದ ಸುಳ್ಳು ಆರೋಪ ಹೊರಿಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಉತ್ತರಪ್ರದೇಶ ಪೊಲೀಸರು ಕೂಡ ಬಜರಂಗದಳದ ಕಾರ್ಯಕರ್ತರ ತಾಳಕ್ಕೆ ತಕ್ಕಂತೆ ನಡೆದುಕೊಂಡಿದ್ದು, ಸನ್ಯಾಸಿನಿಯರು ಸೂಕ್ತ ದಾಖಲೆ ನೀಡಿದರೂ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ 11:30ವರೆಗೆ ಠಾಣೆಯಲ್ಲಿಯೇ ಕೂರಿಸಿದ್ದರು. ಈ ಸಂಬಂಧ ವಿವರವಾದ ವರದಿಯನ್ನು ಮಹಾನಾಯ ಮಾಧ್ಯಮ ಮಾತ್ರವೇ ಪ್ರಕಟಿಸಿದ್ದು, ಈ ಕೆಳಗಿನ ಸುದ್ದಿಗೆ ಕ್ಲಿಕ್ ಮಾಡಿ ಸುದ್ದಿ ಓದಬಹುದಾಗಿದೆ.