ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಹೇಳಿಕೆ ನೀಡಿದ ಡಿಎಂಕೆ ಅಭ್ಯರ್ಥಿ
ಚೆನ್ನೈ: ಮಹಿಳೆಯರ ಬಗ್ಗೆ ಅತೀ ಕೆಟ್ಟ ಪದಗಳನ್ನು ಬಳಸಿ ಹೇಳಿಕೆ ನೀಡುವ ಮೂಲಕ ತಮಿಳುನಾಡಿನ ಡಿಎಂಕೆ ಅಭ್ಯರ್ಥಿ ದಿಂಡಿಗಲ್ ಲಿಯೋನಿ ಅಶ್ಲೀಲ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದು, ಸಾರ್ವಜನಿಕ ಸಭೆಯಲ್ಲಿ ಅವರು ಮಹಿಳೆಯರ ಬಗ್ಗೆ ಅಶ್ಲೀಲಕರವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ವಿದೇಶಿ ಹಸುಗಳ ಹಾಲು ಕುಡಿಯುತ್ತಿರುವುದರಿಂದ ತಮ್ಮ ಆಕಾರವನ್ನು ಕಳೆದುಕೊಂಡು ಬ್ಯಾರೆಲ್ ಗಳಂತೆ ಊದಿಕೊಳ್ಳುತ್ತಿದ್ದಾರೆ. ಅವರ ಸೊಂಟ ತೆಳ್ಳಗಿದ್ದರೂ ಅವರ ದೇಹ ಕೊಬ್ಬಿರುತ್ತದೆ ಎಂದು ದಿಂಡಿಗಲ್ ಲಿಯೋನಿ ಹೇಳಿಕೆ ನೀಡಿದ್ದಾರೆ.
ವಿದೇಶಿ ಹಸುಗಳ ಹಾಲನ್ನು ಅವರು ಕುಡಿಯುವುದರಿಂದ ಮಕ್ಕಳನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗದಷ್ಟು ಅವರು ದಪ್ಪವಾಗಿ ಬಿಡುತ್ತಾರೆ. ವಿದೇಶದಲ್ಲಿ ಯಂತ್ರದ ಮೂಲಕ ಹಾಲು ಕರೆಯಲಾಗುತ್ತದೆ ಈ ಹಾಲು ಕುಡಿಯುವುದರಿಂದಾಗಿ ಇಂತಹ ಸಮಸ್ಯೆ ಬರುತ್ತದೆ ಎಂದು ಅವರು ಸಭೆಯಲ್ಲಿ ಹೇಳಿದ್ದಾರೆ.
ಅಭ್ಯರ್ಥಿಯ ಈ ಹೇಳಿಕೆಯನ್ನು ತಡೆಯಲು ಅವರ ಮಾತಿನ ಮಧ್ಯೆ ಕಾರ್ಯಕರ್ತರೋರ್ವರು ಪ್ರಯತ್ನಿಸಿದರು. ಆದರೆ, ದಿಂಡಿಗಲ್ ಲಿಯೋನಿ ತನ್ನ ಮಾತುಗಳನ್ನು ಮುಂದುವರಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದೆ. ಆದರೆ, ಬಿಜೆಪಿ ಬಂಗಾಳದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಮಹಿಳೆ ಮತ್ತು ಹಸುಗಳ ಬಗ್ಗೆ ಇಂತಹದ್ದೇ ಹೇಳಿಕೆಯನ್ನು ನೀಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
ಬಿಜೆಪಿಯ ಪ್ರಣಾಳಿಕೆ ಕಂಡು ಬೆಚ್ಚಿಬಿದ್ದ ತಮಿಳುನಾಡು ಬಿಜೆಪಿ ನಾಯಕರು | ಕಾರಣ ಏನು ಗೊತ್ತಾ?