ಅಮೆರಿಕ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ಒಪ್ಪಿಗೆ: ಅಮೆರಿಕ ಘೋಷಣೆ
ಲೆಬನಾನ್ ಮೂಲದ ಹಿಜ್ಬುಲಾ ಹಾಗೂ ಇಸ್ರೇಲ್ ನಡುವಿನ ಹಗೆತನವನ್ನು ಶಾಶ್ವತವಾಗಿ ನಿಲ್ಲಿಸುವ ಗುರಿಯನ್ನು ಹೊಂದಿರುವ ಯುಎಸ್ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಜೋ ಬೈಡನ್ ಘೋಷಿಸಿದ್ದಾರೆ.
ಇಸ್ರೇಲ್ ನ ಭದ್ರತಾ ಕ್ಯಾಬಿನೆಟ್ ಒಪ್ಪಂದವನ್ನು ಅನುಮೋದಿಸಿದ ಸ್ವಲ್ಪ ಸಮಯದ ನಂತರ ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಬೈಡನ್, ಕದನ ವಿರಾಮದ ಭಾಗವಾಗಿ ಇಸ್ರೇಲ್ ಮುಂದಿನ 60 ದಿನಗಳಲ್ಲಿ ಲೆಬನಾನ್ ನಿಂದ ತನ್ನ ಸೈನ್ಯವನ್ನು ಕ್ರಮೇಣ ಹಿಂತೆಗೆದುಕೊಳ್ಳಲು ಪ್ರಾರಂಭಿಸುತ್ತದೆ ಎಂದು ಘೋಷಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವಿನ ತಿಂಗಳುಗಳ ಹೋರಾಟವನ್ನು ಕೊನೆಗೊಳಿಸುವ ಉದ್ದೇಶವನ್ನು ಹೊಂದಿರುವ ಈ ಒಪ್ಪಂದವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಕ್ಯಾಬಿನೆಟ್ ಗೆ ಪ್ರಸ್ತುತಪಡಿಸಿದ್ದಾರೆ ಎಂದು ವರದಿಯಾಗಿದೆ. ಗಾಝಾ ಬಿಕ್ಕಟ್ಟಿನಿಂದ ಪ್ರಚೋದಿಸಲ್ಪಟ್ಟ ಸಂಘರ್ಷವು ಸಾವಿರಾರು ಸಾವುಗಳು ಮತ್ತು ಸ್ಥಳಾಂತರಗಳಿಗೆ ಕಾರಣವಾಗಿದೆ.
ನೆತನ್ಯಾಹು ಮತ್ತು ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj