ಮದುವೆಯಾಗ್ತೇನೆ ಅಂತ ಕೊರಗಜ್ಜನ ಮೇಲೆ ಆಣೆ ಮಾಡಿಯೂ ಕೈಕೊಟ್ಟ: ನೊಂದು ಪ್ರಾಣವನ್ನೇ ಬಿಟ್ಟಳು ಅಪ್ರಾಪ್ತೆ - Mahanayaka
10:01 AM Thursday 26 - December 2024

ಮದುವೆಯಾಗ್ತೇನೆ ಅಂತ ಕೊರಗಜ್ಜನ ಮೇಲೆ ಆಣೆ ಮಾಡಿಯೂ ಕೈಕೊಟ್ಟ: ನೊಂದು ಪ್ರಾಣವನ್ನೇ ಬಿಟ್ಟಳು ಅಪ್ರಾಪ್ತೆ

praveen gowda
29/11/2024

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿ ಮನೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರು ನೀಡಿದ್ದು  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬಿಸಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ವಿದ್ಯಾರ್ಥಿನಿ ತಾಯಿ ಜೊತೆ ನನ್ನನ್ನು ಪ್ರವೀಣ್ ಜೊತೆ ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ. ಯುವಕ ಆಕೆಯ ಜೊತೆ ಬೇರೆ ಬೇರೆ ಕಡೆಗಳಿಗೆ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ನಾನು ನಿನ್ನನ್ನು ಮದುವೆಯಾಗಲ್ಲ ಎಂದು , ಸತ್ತರೆ ಸಾಯಿ ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿ ಮೋಸ ಮಾಡಿದ್ದರಿಂದ ನೊಂದ ವಿದ್ಯಾರ್ಥಿನಿ ನ.20 ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ. ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ತಾಯಿ ಜೊತೆ ಮಲಗಿದ್ದಾಗ ವಾಂತಿ ಮಾಡಿದ್ದರಿಂದ ಮನೆಮಂದಿಗೆ ವಿಚಾರ ತಿಳಿದು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನ.26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಉಮನಗೌಡ ಮಗನಾದ ಪ್ರವೀಣ್ (22) ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಪೊಲೀಸರು‌ BNS 2023 (u/s-107) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ಪೀಚ್ ಆಫ್ ಮಾಡಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗೆಳೆತನ: 

ಕಳೆದ ಏಂಟು ತಿಂಗಳ ಹಿಂದೆ ವಿದ್ಯಾರ್ಥಿನಿ ಹಾಗೂ ಯುವಕನ ನಡುವೆ ಇನ್ಟಾಗ್ರಾಂ ಮೂಲಕ ಪರಿಚಯವಾಗಿದೆ‌. ಬಳಿಕ ಮದುವೆಯಾಗುವುದಾಗಿ ವಿದ್ಯಾರ್ಥಿನಿಗೆ ಯುವಕ ಕೊರಗಜ್ಜನ ಮೇಲೆ ಪ್ರಮಾಣ ಮಾಡಿ ಹೇಳಿದ್ದ ಎನ್ನಲಾಗಿದೆ.  ಈ ವಿಚಾರವನ್ನು ತನ್ನ ತಾಯಿ ಜೊತೆ ಮೂರು ತಿಂಗಳ ಹಿಂದೆ ವಿದ್ಯಾರ್ಥಿನಿ ತಿಳಿಸಿದ್ದಾಳೆ. ನನಗೆ ಆತನ ಜೊತೆ ಮದುವೆ ಮಾಡಿಕೊಡಿ ಎಂದು ತಾಯಿ ಬಳಿ ಕೇಳಿದ್ದಾಳೆ.ಈ ವಿಚಾರವಾಗಿ ತಾಯಿ ನಿನಗೆ ವಯಸ್ಸು ಆಗಿಲ್ಲ ನಿನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಮಾಡುವ ಎಂದು ಬುದ್ದಿ ಮಾತು ಹೇಳಿದ್ದಾರೆ‌. ಯುವಕನ ಜೊತೆ ತಾಯಿಗೆ ಮಾತನಾಡಲು ಮಗಳು ಹೇಳಿದ್ದರಿಂದ ಎರಡು ಬಾರಿ ಮೊಬೈಲ್ ನಲ್ಲಿ ಮಾತಾನಾಡಿದ್ದು, ವಯಸ್ಸು ಆಗಲಿ ಆಮೇಲೆ  ಮದುವೆ ಮಾಡುವ ಎಂದಿದ್ದಕ್ಕೆ ಯುವಕ ನನಗೆ ಆಂಟಿ ನಿಮ್ಮ ಮಗಳು ಬೇಕು ನಾನು ಮದುವೆಯಾಗುವುದಾಗಿ ಹೇಳಿದ್ದಾನೆ . ಅದಕ್ಕೆ ತಾಯಿ ಓಕೆ ಅಂದು ಸುಮ್ಮನಿದ್ದರು. ಬಳಿಕ ಇವರಿಬ್ಬರು ದೇವಸ್ಥಾನ, ಇತರ ಕಡೆ ರಜೆ ಸಮಯದಲ್ಲಿ ತಿರುಗಾಡಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಜೊತೆಯಲ್ಲಿ ಸೆಲ್ಫಿ, ಫೋಟೋ ಕೂಡ ತೆಗೆದುಕೊಂಡಿದ್ದಾರೆ.‌ ಇದು ಮೊಬೈಲ್ ನಲ್ಲಿದೆ. ಮೃತಪಟ್ಟ ವಿದ್ಯಾರ್ಥಿನಿಯ ತಾಯಿ ಹೇಳುವ ಪ್ರಕಾರ ಮಗಳ ಹುಟ್ಟುಹಬ್ಬ ಕಳೆದ ತಿಂಗಳು 23 ರಂದು ಇದ್ದು ,ಈ ವೇಳೆ ಯುವಕ ಮಗಳ ಫೋಟೋ ಸ್ಟೇಟಸ್ ಹಾಕಿ ಶುಭಾಶಯ ಸಲ್ಲಿಸಿದ್ದ.  ಅದನ್ನು ಆತನ ಸಂಬಂಧಿಗಳು ನಮ್ಮ ದಿಡುಪೆಯಲ್ಲಿದ್ದು ಅವರು ನೋಡಿದ್ದಾರೆ. ಅವರು ಬಡ ಕುಟುಂಬದ ಸಂಬಂಧ ಬೇಡ ಅಂತಾ ಯುವಕನ ಮನೆಯವರಲ್ಲಿ ಹೇಳಿ ಸಂಬಂಧ ಮುರಿಯುವಂತೆ ಮಾಡಿದ್ದಾರೆ. ಹಾಗಾಗಿ ಯುವಕ ಮಗಳ ಜೊತೆ ಮದುವೆಯಾಗುವುದಿಲ್ಲ ಎಂದು ಕಳೆದ 20 ದಿನದ ಹಿಂದೆ ಹೇಳಿದ್ದ ಎಂದಿದ್ದಾರೆ.

ವಿದ್ಯಾರ್ಥಿನಿ ಮೊಬೈಲ್ ನಲ್ಲಿದೆ ನಿಗೂಢ ರಹಸ್ಯಗಳು

ಇನ್ನೂ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಮನೆಮಂದಿ ಆಕೆಯ ಬಳಿಯಿಂದ ಮೊಬೈಲ್ ಪರಿಶೀಲನೆ ಮಾಡಿದ್ದು ಈ ವೇಳೆ ಅನೇಕ ಇಬ್ಬರ ನಡುವೆ ನಡೆದ ಮೆಸೇಜ್, ವಿಡಿಯೋ ಕರೆ ಮಾಡಿದ ಚಾಟ್ ಲಿಸ್ಟ್ ,ತಿರುಗಾಡಿದ ಫೋಟೋಗಳು ಹಾಗೂ ಇನ್ನಿತರ ನಿಗೂಢ ರಹಸ್ಯಗಳು ಪತ್ತೆಯಾಗಿದೆ. ವಿದ್ಯಾರ್ಥಿನಿ ಜೊತೆ ಯುವಕ ನ.25 ದವರೆಗೂ ಸಂಪರ್ಕದಲ್ಲಿದ್ದು ಮೆಸೇಜ್ ಮೂಲಕ ಮಾತಾನಾಡಿದ್ದಾರೆ. ಈ ವೇಳೆ ನನಗೆ ನೀನು ಬೇಕು ,ನನ್ನಿಂದ ನಿನ್ನನ್ನು ಮರೆತುಬೀಡಲು ಸಾಧ್ಯವಾಗುತ್ತಿಲ್ಲ, ನನ್ನನ್ನು ಮದುವೆಯಾಗು ಎಂದು ವಿದ್ಯಾರ್ಥಿನಿ ಗೋಳಾಡಿದ್ದಾಳೆ. ಇದೆಲ್ಲ ಮೆಸೇಜ್ ಹಾಗೆಯೇ ಮೊಬೈಲ್ ನಲ್ಲಿಗೆ. ಇದೀಗ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಅಂತಾ ವಿದ್ಯಾರ್ಥಿನಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ