ಗಾಝಾ ಮೇಲೆ ಇಸ್ರೇಲ್ ದಾಳಿ: ಸಂಧಾನಕ್ಕಾಗಿ ಮಧ್ಯಪ್ರವೇಶಿಸಲು ನಾನು ರೆಡಿ ಎಂದ ಚೀನಾ - Mahanayaka
5:21 PM Thursday 26 - December 2024

ಗಾಝಾ ಮೇಲೆ ಇಸ್ರೇಲ್ ದಾಳಿ: ಸಂಧಾನಕ್ಕಾಗಿ ಮಧ್ಯಪ್ರವೇಶಿಸಲು ನಾನು ರೆಡಿ ಎಂದ ಚೀನಾ

30/11/2024

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸುವುದಕ್ಕಾಗಿ ಮಧ್ಯಪ್ರವೇಶಿಸಲು ಸಿದ್ಧ ಎಂದು ಚೀನಾದ ಅಧ್ಯಕ್ಷ ಶೀ ಜಿನ್ ಪಿಂಗ್ ಹೇಳಿದ್ದಾರೆ. ಸ್ವತಂತ್ರ ಸಾರ್ವಭೌಮ ಫೆಲಸ್ತೀನ್ ರಾಷ್ಟ್ರ ಸೇರಿದಂತೆ ದ್ವಿರಾಷ್ಟ್ರ ಸಿದ್ಧಾಂತವೇ ಅಲ್ಲಿನ ಸಮಸ್ಯೆಗೆ ಪರಿಹಾರ ಎಂದು ಅವರು ಹೇಳಿದ್ದಾರೆ.

ಯುದ್ಧವನ್ನು ತಕ್ಷಣ ನಿಲ್ಲಿಸಬೇಕು. ಈ ಯುದ್ಧಕ್ಕೆ ಸಂಬಂಧಿಸಿ ಭದ್ರತಾ ಸಮಿತಿಯ ಪ್ರಸ್ತಾಪದಂತೆ ಶಾಂತಿಗೆ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸೇರಿ ಕೆಲಸ ಮಾಡಲು ಚೀನಾ ಸಿದ್ಧವಿದೆ. ಹಾಗೆಯೇ ವಿಶ್ವ ಸಂಸ್ಥೆಯ ಮೂಲಕ ಗಾಝಾಕ್ಕೆ ನೆರವನ್ನು ಕಳುಹಿಸಿ ಕೊಡುವುದಾಗಿಯೂ ಚೀನಾ ಹೇಳಿದೆ.

1967ರ ಗಡಿ ಗುರುತಿನಂತೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆ ಆಗಬೇಕು. ಹಾಗೆಯೇ ಪಶ್ಚಿಮ ಜೆರುಸಲೇಮನ್ನು ರಾಜಧಾನಿಯಾಗಿ ಫೆಲೆಸ್ತೀನ್ ರಾಷ್ಟ್ರದ ರೂಪೀಕರಣವಾಗಬೇಕು ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ