ಕಳ್ಳತನದ ಆರೋಪ ಹೊರಿಸಿ ಬದುಕಿ ಬಾಳಬೇಕಿದ್ದ ಬಾಲಕನನ್ನು ಥಳಿಸಿಕೊಂದ ಅಂಗಡಿ ಮಾಲಕ !
ಬೆಂಗಳೂರು: ಅಂಗಡಿ ಮಾಲಕನೋರ್ವ ಬಾಲಕನನ್ನು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಹಾವೇರಿಯ ಉಪ್ಪಾರಸಿಯಲ್ಲಿ ನಡೆದಿದ್ದು, ಬಾಲಕ ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ.
ಮಾರ್ಚ್ 16ರಂದು ಈ ಘಟನೆ ನಡೆದಿದೆ. ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಅಂಗಡಿ ಮಾಲಕ ಥಳಿಸಿದ್ದೇ ಅಲ್ಲದೇ ಬಾಲಕನನ್ನು ಅಕ್ರಮ ಬಂಧನದಲ್ಲಿರಿಸಿದ್ದಾನೆ.
ಇನ್ನೂ ಬಾಲಕನ ತಂದೆ ನೀಡಿರುವ ದೂರಿನಲ್ಲಿ ಅಂಗಡಿ ಮಾಲಕ ಪವನ್ ಕರಿಶೆಟ್ಟನ ಮನುವಾದಿ ಮಾದರಿಯ ಹೀನ ಕೃತ್ಯವನ್ನು ವಿವರಿಸಲಾಗಿದೆ. ದಿನಸಿ ವಸ್ತುಗಳನ್ನು ತರಲು ಬಾಲಕನ ತಂದೆ ಹಿರೇಮಠ ಬಾಲಕನನ್ನು ಅಂಗಡಿಗೆ ಕಳುಹಿಸಿದ್ದರು. ಆದರೆ ಎರಡು ಗಂಟೆ ಕಳೆದರೂ ಬಾಲಕ ಬಾರದೇ ಇದ್ದಾಗ ಅನುಮಾನಗೊಂಡ ಪೋಷಕರು ಅಂಗಡಿಗೆ ಬಂದು ನೋಡಿದಾಗ, ಕಳ್ಳತನದ ಆರೋಪ ಹೊರಿಸಿ ತಮ್ಮ ಮಗನಿಗೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಮಗನನ್ನು ಕಳುಹಿಸುವಂತೆ ಅಂಗಡಿ ಮಾಲಕನ ಬಳಿ ಮನವಿ ಮಾಡಿದರೂ ಆತ ಬಿಡುಗಡೆ ಮಾಡಲಿಲ್ಲ. ತಾಯಿ ಹೋಗಿ ಮನವಿ ಮಾಡಿದಾಗ “ನೀನು ಐದು ಗಂಟೆಗೆ ಬಾ” ಎಂದು ಮನುವಾದಿಯಂತೆ ಸತಾಯಿಸಿದ್ದಾನೆ.
ಕೊನೆಗೆ ಅಂಗಡಿ ಮಾಲಕನ ಜೊತೆಗೆ ಜಗಳವಾಡಿದ ಬಳಿಕ ಬಾಲಕನನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಬಾಲಕನ ಸ್ಥಿತಿ ಗಂಭೀರವಾಗಿತ್ತು. ಬಾಲಕನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತ ವಿಡಿಯೋಗೆ ಹೇಳಿಕೆ ನೀಡಿದ್ದು, ಅಂಗಡಿ ಮಾಲಕನ ಹೀನ ಕೃತ್ಯವನ್ನು ತಿಳಿಸಿದ್ದಾನೆ.
ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರಿಂದಾಗಿ ಬಾಲಕನ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ. ಸತತ 6 ದಿನಗಳವರೆಗೆ ಭಯಾನಕ ನೋವುಗಳನ್ನು ಸಹಿಸಿಕೊಂಡ ಬಾಲಕ ಕೊನೆಗೂ ದ್ವೇಷ, ಪ್ರತಿಕಾರ ತುಂಬಿದ ಈ ಭೂಲೋಕಕ್ಕೆ ವಿದಾಯ ಹೇಳಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: