ಕಾಂಗ್ರೆಸ್ ಮನವಿ ಮಾಡಿದರೆ ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಲು ಸಿದ್ಧ: ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ
ಅಸ್ಸಾಂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ಪತ್ರ ಬರೆದ್ರೆ ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸತತ ಐದು ಅವಧಿಗೆ ಕಾಂಗ್ರೆಸ್ ನಿಯಂತ್ರಣದಲ್ಲಿದ್ದ ಮುಸ್ಲಿಂ ಪ್ರಾಬಲ್ಯದ ಸಮಗುರಿಯನ್ನು ಗೆಲ್ಲಲು ಬಿಜೆಪಿ ಗೋಮಾಂಸ ವಿತರಿಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶರ್ಮಾ, ವಿರೋಧ ಪಕ್ಷವು ಈ ವಿಷಯವನ್ನು ಎತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
“ಸಮಗುರಿ 25 ವರ್ಷಗಳ ಕಾಲ ಕಾಂಗ್ರೆಸ್ ಜೊತೆಗಿದ್ದರು. ಸಮಗುರಿಯಂತಹ ಕ್ಷೇತ್ರದಲ್ಲಿ ಕಾಂಗ್ರೆಸ್ 27,000 ಮತಗಳಿಂದ ಸೋತಿರುವುದು ಅದರ ಇತಿಹಾಸದಲ್ಲೇ ಅತಿದೊಡ್ಡ ಅವಮಾನ. ಇದು ಬಿಜೆಪಿಯ ಗೆಲುವಿಗಿಂತ ಕಾಂಗ್ರೆಸ್ ನ ಸೋಲು” ಎಂದು ಅವರು ಶನಿವಾರ ಇಲ್ಲಿ ಪಕ್ಷದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ದಿಪ್ಲು ರಂಜನ್ ಶರ್ಮಾ ಅವರು ಪಕ್ಷದ ಸಂಸದ ರಕಿಬುಲ್ ಹುಸೇನ್ ಅವರ ಪುತ್ರ ಕಾಂಗ್ರೆಸ್ನ ತಂಝಿಲ್ ಅವರನ್ನು 24,501 ಮತಗಳ ಅಂತರದಿಂದ ಸೋಲಿಸಿದ್ದರು. ಈ ಮಧ್ಯೆ ರಕಿಬುಲ್ ಹುಸೇನ್ ಗೋಮಾಂಸ ತಿನ್ನುವುದು ತಪ್ಪು ಎಂದು ಒಂದು ಒಳ್ಳೆಯ ವಿಷಯ ಹೇಳಿದ್ರು ಅಲ್ಲವೇ? ಮತದಾರರಿಗೆ ಗೋಮಾಂಸ ನೀಡುವ ಮೂಲಕ ಕಾಂಗ್ರೆಸ್-ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವುದು ತಪ್ಪು ಎಂದು ಅವರು ಹೇಳಿದರು” ಎಂದು ಸಂಸದರ ವರದಿಯ ಬಗ್ಗೆ ಕೇಳಿದಾಗ ಸಿಎಂ ಈ ರೀತಿ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj