ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ದೊಡ್ಡದು:  ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿಯ ಮಂಗಳೂರು ನಗರ ಶಾಖೆ ಉದ್ಘಾಟನೆ - Mahanayaka
7:30 PM Wednesday 5 - February 2025

ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ದೊಡ್ಡದು:  ಪರಿವರ್ತನಾ ಕೋ—ಆಪರೇಟಿವ್ ಸೊಸೈಟಿಯ ಮಂಗಳೂರು ನಗರ ಶಾಖೆ ಉದ್ಘಾಟನೆ

03/12/2024

ಮಂಗಳೂರು: ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಸಂಸ್ಥೆಗಳು ಪರಿಣಾಮಕಾರಿ ಪಾತ್ರ ವಹಿಸಿದೆ ಮತ್ತು ಸರಕಾರದ ಸವಲತ್ತುಗಳ ಅನುಷ್ಠಾನದಲ್ಲಿಯೂ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದು ಅಂಚೆ ಮತ್ತು ಬಿಎಸ್ ಎನ್ ಎಲ್ ನೌಕರರ ಸಹಕಾರ ಸಂಘ ಮಂಗಳೂರು ಅಧ್ಯಕ್ಷ ಶೈಲೇಶ್ ಕುಮಾ‌ರ್ ಹೇಳಿದರು.

ಅವರು ಸೋಮವಾರ ಮಂಗಳೂರು, ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣ ಬಳಿಯ ಪಯೋನಿಯರ್ ಕಾಂಪ್ಲೆಕ್ಸ್‌ ನಲ್ಲಿ ಪರಿವರ್ತನಾ ಕೋ–ಆಪರೇಟಿವ್ ಸೊಸೈಟಿ(Parivartana Co–operative Society) ಬಜಪೆ ಮಂಗಳೂರು ನಗರ ಶಾಖೆ ಉದ್ಘಾಟಿಸಿದ ಬಳಿಕ ಪುರಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪರಿವರ್ತನಾ ಕೋ — ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕೃಷ್ಣಾನಂದ ಡಿ. ಮಾತನಾಡಿ, ಸದಸ್ಯರ, ಗ್ರಾಹಕರ, ಆಡಳಿತ ಸಮಿತಿ ಮತ್ತು ಸಿಬ್ಬಂದಿಯ ಸಕಾರಾತ್ಮಕ ಸಹಕಾರದಿಂದಾಗಿ ಸಂಸ್ಥೆ ಹಂತ ಹಂತವಾಗಿ ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ ಎಂದರು.

ಸಂಸ್ಥೆಯ ಪ್ರೋತ್ಸಾಹಕರಾದ ಮ್ಯಾಕ್ಸಿಂ ಪಿಂಟೋ ಅವರನ್ನು ಗೌರವಿಸ ಲಾಯಿತು. ಸಂಸ್ಥೆಯ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.

ಕಾನೂನು ಸಲಹೆಗಾರ ಸುಖೇಶ್ ಶೆಟ್ಟಿ ಭಾರತೀಯ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್‌, ಮಂಗಳೂರು ಮನಪಾ ಕಾರ್ಪೋರೇಟರ್‌ ಅಬ್ದುಲ್‌ ಲತೀಫ್, ಮಾಜಿ ಮೇಯ‌ರ್ ಮಹಮ್ಮದ್‌ ಕುಂಜತ್ತಬೈಲ್, ಕರ್ಣಾಟಕ ಬ್ಯಾಂಕ್‌ನ ಹಿರಿಯ ನಿವೃತ್ತ ಅಧಿಕಾರಿ

ಸದಾಶಿವ ಪಡುಬಿದ್ರೆ, ದ.ಕ. ಜಿಲ್ಲಾ ಬೀದಿ ವ್ಯಾಪಾರಸ್ಥರ ಸಹಕಾರ ಸಂಘದ ಉಪಾಧ್ಯಕ್ಷ ಹರೀಶ್‌ ಪೂಜಾರಿ, ಸಾಮಾಜಿಕ ಕಾರ್ಯ ಕರ್ತ ಗೋಪಾಲ್ ಮುತ್ತೂರು, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಷಾ, ಪರಿವರ್ತನಾ ಗ್ರಾಮೀಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಲಿಯಂ ಇ.ಲೋಬೊ, ಉಪಾಧ್ಯಕ್ಷೆ ಜಯಲಕ್ಷ್ಮೀ, ನಿರ್ದೇಶಕರಾದ ಹರೀಶ್ವರ ರಾವ್, ಕರುಣಾಕರ, ರುಕ್ಕಯ ಅಮೀನ್, ಗಂಗಾಧರ ಪೂಜಾರಿ,  ನಾಗರಾಜ ಕೆ., ಆಲ್ವಿನ್ ಎಫ್.ಡಿಸೋಜ, ಬಿ.ಕೆ.ಇಮ್ತಿಯಾಝ್,  ಪದ್ಮನಾಭ ಅಮೀನ್, ಸಿಬ್ಬಂದಿ ಉಪಸ್ಥಿತರಿದ್ದರು.

ಮುಖ್ಯ ನಿರ್ವಹಣಾಧಿಕಾರಿ ಸ್ವಾತಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ವೈಶಾಲಿ ಸ್ವಾಗತಿಸಿದರು. ಕಮಲಾಕ್ಷ ಬಜಾಲ್‌ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ