‘ಮಹಾ’ ಹೈಡ್ರಾಮಾ: ಏಕನಾಥ್ ಶಿಂಧೆಗೆ ಮತ್ತೆ ಅನಾರೋಗ್ಯ; ಯಾರು ಸಿಎಂ?
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಭರ್ಜರಿ ಸಿದ್ದತೆ ನಡೆಯುತ್ತಿರುವಾಗಲೇ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತೆ ಆರೋಗ್ಯಕ್ಕೆ ಒಳಗಾಗಿದ್ದಾರೆ. ಅವರನ್ನು ಥಾಣೆಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಅವರ ಅನಾರೋಗ್ಯಕ್ಕೂ ರಾಜಕೀಯ ಕಾರಣ ಹುಡುಕಲಾಗುತ್ತಿದೆ.
ಏಕನಾಥ್ ಶಿಂಧೆಯನ್ನು ಪರೀಕ್ಷಿಸಿದ ವೈದ್ಯರು, ಅವರ ಸಂಪೂರ್ಣ ಆರೋಗ್ಯ ತಪಾಸಣೆಗೆ ಸಲಹೆ ನೀಡಿದ್ದಾರೆ. ಏಕನಾಥ್ ಶಿಂಧೆ ಕಳೆದ ವಾರದಿಂದ ಗಂಟಲು ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ.
“ನನ್ನ ಆರೋಗ್ಯ ತುಂಬಾ ಚೆನ್ನಾಗಿದೆ” ಎಂದು ವೈದ್ಯಕೀಯ ತಪಾಸಣೆಯ ನಂತರ ಆಸ್ಪತ್ರೆಯಿಂದ ನಿರ್ಗಮಿಸುತ್ತಿದ್ದ ಏಕನಾಥ್ ಶಿಂಧೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.
ನೂತನ ಸರಕಾರ ರಚನೆ ವೈಖರಿಯ ಬಗ್ಗೆ ಅಸಮಾಧಾನಗೊಂಡಿರುವ ಏಕನಾಥ್ ಶಿಂಧೆ, ಶುಕ್ರವಾರ ಸತಾರ ಜಿಲ್ಲೆಯಲ್ಲಿನ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ ಎಂಬ ವದಂತಿಗಳು ಹರಡಿದ್ದು, ತಮ್ಮ ಸ್ವಗ್ರಾಮಕ್ಕೆ ತಲುಪಿದ ನಂತರ, ಏಕನಾಥ್ ಶಿಂಧೆ ಜ್ವರಕ್ಕೆ ತುತ್ತಾಗಿದ್ದರು. ಏಕನಾಥ್ ಶಿಂಧೆ, ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರಿಂದಾಗಿಯೇ ಮಹಾರಾಷ್ಟಾದ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ತಡವಾಗಿದೆ ಎಂದು ಹೇಳಲಾಗುತ್ತಿದೆ. ಅವರ ಈಗಿನ ಅನಾರೋಗ್ಯದ ಹಿನ್ನೆಲೆಯನ್ನೂ ರಾಜಕೀಯ ಒತ್ತಡದ ಪ್ರಯತ್ನ ಎಂಬ ವಿಶ್ಲೇಷಣೆ ಕೂಡ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj