ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್ ನಲ್ಲಿ ನಟಿಸಲು ರಿಷಬ್ ಶೆಟ್ಟಿ ಒಪ್ಪಿಗೆ: ಕನ್ನಡಿಗರಿಂದ ವ್ಯಾಪಕ ವಿರೋಧ
ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್ ನಲ್ಲಿ ನಟಿಸುವುದಾಗಿ ಘೋಷಿಸಿಕೊಂಡಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭಗೊಂಡಿದೆ.
ಕನ್ನಡಿಗರ ಪಾಲಿಗೆ ಶಿವಾಜಿ ದಾಳಿಕೋರ. ಕರ್ನಾಟಕಕ್ಕೆ ಶಿವಾಜಿಯ ಕೊಡುಗೆ ಏನು ಅಂತ ಕನ್ನಡಿಗರು ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿರುವುದು ಕಂಡು ಬಂದಿದೆ.
ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು , ಕುಮಟಾ ವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ.
ನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಕಿರಣ್ ಕೊಡ್ಲಾಡಿ ಎಂಬವರು ಪ್ರಶ್ನಿಸಿದ್ದಾರೆ.
ಎಂಟು ಹೆಂಡಿರ ಗಂಡ ಅದು ಹೇಗೆ ಆದರ್ಶ ಪ್ರಾಯ ಅಂತ ರಿಷಭ್ ಅವರೇ ಹೇಳಬೇಕು! ಅವನೇನು ರಾಮನೇ? ಕನ್ನಡಿಗರನ್ನು ಲೂಟಿ ಹೊಡೆದ ರಾಜ. ಬೆಳವಡಿ ಮಲ್ಲಮ್ಮನ ಮುಂದೆ ಸೋತು ಶರಣಾದ ರಾಜ ಯಾವ ರೀತಿಯ ಶೂರನೋ ತಿಳಿಯದು! ಇನ್ನೂ ಈತನ ಸೈನ್ಯದ ಮುಖಂಡರು ಮುಸಲ್ಮಾನರು ಆಗಿದ್ದರು ಆದರೆ ಈತ ಹೇಗೆ ಹಿಂದೂಗಳ ಹೆಮ್ಮೆಯೋ ಕಾಣೆ ಅಂತ ಚಂದನವನ ಎಂಬ ಎಕ್ಸ್ ಖಾತೆಯಿಂದ ಪ್ರಶ್ನಿಸಲಾಗಿದೆ.
ಹೀಗೆ ನೂರಾರು ಸಂಖ್ಯೆಯಲ್ಲಿ ಶಿವಾಜಿ ಬಯೋಪಿಕ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಜನರು ಶಿವಾಜಿ ಬಯೋಪಿಕ್ ನಲ್ಲಿ ನಟಿಸುವ ರಿಷಬ್ ಶೆಟ್ಟಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂತಾರದಲ್ಲಿ ಗಳಿಸಿದ ಖ್ಯಾತಿಯನ್ನು ಶಿವಾಜಿ ಬಯೋಪಿಕ್ ನಿಂದ ಕಳೆದುಕೊಳ್ಳಬೇಡಿ. ನಮ್ಮ ಮಣ್ಣಿನ ಕಥೆಗಳನ್ನ ಕೊಡಿ ಅಂತ ರಿಷಬ್ ಶೆಟ್ಟಿಗೆ ಮನವಿ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: