ಜನ ಕಲ್ಯಾಣ ಸಮಾವೇಶ: ಸರಿಯಾದ ಸಮಯಕ್ಕೆ ಬಸ್ ಸಿಗದೇ ಪರದಾಡಿದ ಜನ
ಹಾಸನ: ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಜನ ಕರೆತರಲು ಸಾರಿಗೆ ಬಸ್ ಬಳಕೆ ಮಾಡಿರುವ ಹಿನ್ನೆಲೆ ಬಸ್ ಗಳಿಲ್ಲದೇ ನೌಕರರು, ವಿದ್ಯಾರ್ಥಿಗಳು ಜನ ಸಾಮಾನ್ಯರು ಪರದಾಡಿರುವ ಘಟನೆ ನಡೆದಿದೆ.
ಜನ ಕಲ್ಯಾಣ ಸಮಾವೇಶಕ್ಕೆ ಜನರನ್ನು ಕರೆತರಲು ಸಾರಿಗೆ ಬಸ್ ಬಳಸಿಕೊಳ್ಳಲಾಗಿತ್ತು. ಇದರಿಂದಾಗಿ ಇಂದು ಬೆಳಗ್ಗೆ ಪ್ರಯಾಣಿಕರು ಸರಿಯಾದ ಬಸ್ ಗಳು ಸಿಗದೇ ಪರದಾಡುವಂತಾಯಿತು.
ಗ್ರಾಮೀಣ ಭಾಗಕ್ಕೆ ತೆರಳುವ ಜನರು ಪರದಾಡುವಂತಾಗಿತ್ತು. ಆಟೋ, ವ್ಯಾನ್, ದ್ವಿಚಕ್ರ ವಾಹನಗಳನ್ನು ಜನರು ಅನಿವಾರ್ಯವಾಗಿ ಬಳಸುವಂತಾಗಿತ್ತು. ಗಂಟೆಗೊಂದರಂತೆ ಬಂದ ಬಸ್ ಗಳು ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರಿಂದ ತುಂಬಿ ಹೋಗುತ್ತಿದ್ದು, ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ಪ್ರಯಾಣಿಸಲಾಗದೇ ವೃದ್ಧರು, ಮಹಿಳೆಯರು, ಮಕ್ಕಳು ಸಂಕಷ್ಟಕ್ಕೀಡಾದರು.
ಮೈಸೂರಿಗೂ ಸಹ ಬಸ್ ನ ಕೊರತೆ ತಟ್ಟಿದ್ದು, ನೂರಾರು ಬಸ್ ಗಳು ಜಿಲ್ಲೆಯಿಂದ ಹೊರಟಿದ್ದು, ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳಲು ಪರದಾಡುವಂತಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಬಸ್ ಸಿಬ್ಬಂದಿ ಜೊತೆಗೆ ಮಾತಿನ ಚಕಮಕಿಯೂ ನಡೆಯಿತು.
ಬಸ್ ಗಳಿಗೆ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ಕಿತ್ತೆಸೆದು ಸಾರಿಗೆ ಸಂಸ್ಥೆ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: