ದಲಿತ ಸಮುದಾಯದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಅಡ್ಡಿ: ಮೃತದೇಹ ಉಳುವ ಗುಂಡಿಗೆ ಇಳಿದು ವಿಕೃತಿ
ಚಿಕ್ಕಮಗಳೂರು: ದಲಿತ ಸಮುದಾಯದ ಮಹಿಳೆಯೊಬ್ಬರ ಮೃತದೇಹ ಅಂತ್ಯಸಂಸ್ಕಾರಕ್ಕೆ ಒಕ್ಕಲಿಗ ಸಮುದಾಯದ ಕೆಲ ಮಂದಿ ಅಡ್ಡಿಯುಂಟುಪಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.
ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಸಿದ್ಧಪಡಿಸುತ್ತಿದ್ದಂತೆಯೇ ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರು ಮೃತದೇಹ ಉಳಲು ತೆಗೆದಿದ್ದ ಗುಂಡಿಯೊಳಗೆ ಇಳಿದು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದರು. ಈ ವೇಳೆ ಮಹಿಳಾ ಪೊಲೀಸರು ಮಹಿಳೆಯನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ಹಾಕಿ, ಮೃತದೇಹದ ಅಂತ್ಯಕ್ರಿಯೆ ಸುಗಮವಾಗಿ ನಡೆಸಲು ನೆರವಾದರು.
ಇದು ವಿವಾದಿತ ಜಾಗ, ಇಲ್ಲಿ ಒಕ್ಕಲಿಗರ ಸಮುದಾಯ ಭವನ ಆಗಬೇಕು. ಈ ವಿವಾದಿತ ಜಾಗದ ಕೇಸು ನ್ಯಾಯಾಲಯದಲ್ಲಿದೆ ಎಂದು ಒಕ್ಕಲಿಗರು ವಾದಿಸಿದ್ದಾರೆ. ಆದರೆ ದಲಿತರ ಮೂಲಭೂತವಾದ ಸ್ಮಶಾನಕ್ಕೆ ಈ ಜಾಗವನ್ನ ಮೀಸಲಿರಿಸಲಾಗಿದೆ ಎನ್ನುವುದು ಇನ್ನೊಂದು ವಾದವಾಗಿದೆ. ಹೀಗಾಗಿ ಎರಡು ಸಮುದಾಯಗಳ ನಡುವೆ ಜಟಾಪಟಿ ನಡೆಯಿತು.
ಮೃತದೇಹ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಗುಂಪುಗೂಡಿ ಅಡ್ಡಿಪಡಿಸಿದ್ದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಆಲ್ದೂರು ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: