ಬಾಬರಿ ಮಸೀದಿ ಧ್ವಂಸ: ಜಂತರ್ ಮಂತರ್ ನಲ್ಲಿ ಪ್ರಮುಖ ನಾಯಕರ ಮತ್ತು ಆಕ್ಟಿವ್ವಿಷ್ಟುಗಳ ಸಭೆ
ಐತಿಹಾಸಿಕ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾದ ಡಿಸೆಂಬರ್ ಆರರ ಸ್ಮರಣಾರ್ಥ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರಮುಖ ನಾಯಕರು ಮತ್ತು ಆಕ್ಟಿವಿಷ್ಟುಗಳು ಸಭೆ ಸೇರಿ ವಿಚಾರಗಳನ್ನು ಹಂಚಿಕೊಂಡರು. ಮಾತ್ರ ಅಲ್ಲ, ಮಂದಿರಗಳು ಎಂದು ಹೇಳಿ ವಿವಿಧ ಮಸೀದಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಸರ್ವೆಗೆ ಅನುಮತಿ ಪಡೆದುಕೊಳ್ಳುತ್ತಿರುವ ಈಗಿನ ವಿದ್ಯಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಡಿಸೆಂಬರ್ 6 1992 ರಂದು 400 ವರ್ಷಗಳ ಹಳೆಯ ಮಸೀದಿಯನ್ನು ಹಾಡು ಹಗಲೇ ಹಿಂದುತ್ವ ಶಕ್ತಿಗಳು ನೆಲಕ್ಕು ಉರುಳಿಸಿದರು. ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಉಪಸ್ಥಿತಿಯಲ್ಲೇ ಈ ಕ್ರಿಮಿನಲ್ ಕೃತ್ಯ ನಡೆಯಿತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಕ್ರಿಮಿನಲ್ ಕೃತ್ಯ ಎಂದು ಸಾರಿದೆ ಎಂದು ಸಭೆಯಲ್ಲಿ ಭಾಗವಹಿಸಿದ ವರು ಅಭಿಪ್ರಾಯಪಟ್ಟರು. ಹಾಗೆಯೇ ಮಸೀದಿಗಳ ಸರ್ವೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟ ನಿವೃತ್ತ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಅವರನ್ನು ತೀವ್ರ ತರಾಟೆಗೆ ಎತ್ತಿಕೊಂಡರು.
ಈ ಸಭೆಯಲ್ಲಿ ಲೋಕರಾಜ್ ಸಂಘಟನೆ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಗಧಾರ್ ಪಾರ್ಟಿ ಆಫ್ ಇಂಡಿಯಾ, ಜಮಾಅತೆ ಇಸ್ಲಾಮಿ ಹಿಂದ್, ಲೋಕ್ ಪಕ್ಷ, ಸಿಟಿಜನ್ ಫಾರ್ ಡೆಮಾಕ್ರಸಿ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್, ಮಜ್ದೂರ್ ಎಕ್ತಾ ಕಮಿಟಿ, ಪುರೋಗಮಿ ಮಹಿಳಾ ಸಂಘಟನೆ, ಸಿ ಪಿ ಐ ಎಂ ಎಲ್, ದಿ ಸಿಖ್ ಫಾರಂ, ಯುನೈಟೆಡ್ ಮುಸ್ಲಿಮ್ಸ್ ಫ್ರು0ಟ್ ಮತ್ತು ಇನ್ನಿತರ ಸಂಘಟನೆಗಳು ಏರ್ಪಡಿಸಿದ್ದು ವು. ಈ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರಾದ ರಾಘವನ್, ಡಾ.ರಈಸುದ್ದೀನ್, ಮುಹಮ್ಮದ್ ಶಾಫಿ, ಪ್ರಕಾಶ್ ರಾವ್, ಡಾ| ಎಸ್ ಕ್ಯೂ ಆರ್ ಇಲ್ಯಾಸ್, ಮುಹಮ್ಮದ್ ಸಲೀಂ ಇಂಜಿನಿಯರ್, ರವೀಂದ್ರಕುಮಾರ್ ಯಾದವ್, ಎನ್ ಡಿ ಪಂಚೋಲಿ, ನ್ಯಾಯವಾದಿ ಶಾಹಿದ್ ಅಲಿ, ಲಾಲಿ ಶಾನಿ, ಡಾ/ ಓಂಕಾರ್ ನಾಥ್ ಕಟಿಯಾರ್ ಮುಂತಾದವರು ಮಾತಾಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj