ಕಾಫಿನಾಡಲ್ಲಿ ಅಪರೂಪದ  ರಕ್ತಕನ್ನಡಿ  ಹಾವು ಪತ್ತೆ: ಇದೆಷ್ಟು ಅಪಾಯಕಾರಿ ಗೊತ್ತಾ? - Mahanayaka
5:15 PM Wednesday 11 - December 2024

ಕಾಫಿನಾಡಲ್ಲಿ ಅಪರೂಪದ  ರಕ್ತಕನ್ನಡಿ  ಹಾವು ಪತ್ತೆ: ಇದೆಷ್ಟು ಅಪಾಯಕಾರಿ ಗೊತ್ತಾ?

raktha kannadi havu
09/12/2024

ಚಿಕ್ಕಮಗಳೂರು:  ಕಾಫಿನಾಡಲ್ಲಿ ಅಪರೂಪದ  ರಕ್ತಕನ್ನಡಿ  ಹಾವು ಪತ್ತೆಯಾಗಿದೆ.  ಉರಗಗಳ ಸಂತತಿಯಲ್ಲೇ ಈ ಕೋರಲ್ ಸ್ನೇಕ್ ಮೋಸ್ಟ್ ಡೇಂಜರ್ ಆಗಿದೆ.  ಮಲೆನಾಡಲ್ಲಿ ಇದನ್ನ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವು ಅಂತಾರೆ.

ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಈ  ಡೇಂಜರ್ ಸ್ನೇಕ್ ಪತ್ತೆಯಾಗಿದೆ. ದೇಹದ ಮೇಲೆ ಕಪ್ಪು ಕೆಳಭಾಗ ಕೆಂಪು ಬಣ್ಣದಿಂದ ಕೂಡಿರುವ ಈ ಹಾವು ಕಡಿದರೆ‌‌ ಸಾಯೋದು ಕಡಿಮೆ, ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ.

ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ, ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ  ಅಪರೂಪದ ಹಾವು ಕಾಣ ಸಿಗುತ್ತದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು  ಕಳಸ ಉರಗತಜ್ಞ ರಿಜ್ವಾನ್ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ