ಸಿರಿಯಾ ಜೈಲಿನ ಭಯಾನಕತೆಯನ್ನು ಬಿಚ್ಚಿಟ್ಟ ಹೊರಬಂದ ವ್ಯಕ್ತಿ: ನಂಬರ್ ನಲ್ಲೇ ಕರೆಯುವ ಔಚಿತ್ಯವೇನು?
ನನಗೆ ಹೆಸರಿಲ್ಲ, 1100 ಎಂದೇ ನನ್ನನ್ನು ಕರೆಯಲಾಗುತ್ತಿತ್ತು ಎಂದು ಸಿರಿಯಾದ ಜೈಲಿನಲ್ಲಿ ವರ್ಷಗಳನ್ನು ಕಳೆದು ಇದೀಗ ಬಿಡುಗಡೆಗೊಂಡ ಹಾಲ ಎಂಬವರು ಮಾಧ್ಯಮದೊಂದಿಗೆ ಅನುಭವ ಹಂಚಿಕೊಂಡಿದ್ದಾರೆ. ವರ್ಷಗಳಿಂದ ಇವರನ್ನು ಇದೇ ನಂಬರಿನೊಂದಿಗೆ ಕರೆಯುವುದರಿಂದಾಗಿ ಇವರು ತನ್ನ ಹೆಸರನ್ನೇ ಹೇಳದಷ್ಟು ಕೀಳರಿಮೆಯಲ್ಲಿದ್ದಾರೆ. ಸಿರಿಯಾದಲ್ಲಿ ಬಂಡುಕೋರರು ಅಸದ್ ಸರಕಾರವನ್ನು ಉಚ್ಛಾಟಿಸಿದ ಬಳಿಕ ಸಾವಿರಾರು ಬಂಧಿಗಳ ಬಿಡುಗಡೆ ನಡೆದಿದೆ. 2019ರಲ್ಲಿ ಅಸದ್ ಸರ್ಕಾರವು ಭಯೋತ್ಪಾದಕನೆಂದು ಹೇಳಿ ಹಾಲನನ್ನ ಬಂಧಿಸಿತ್ತು. ಯಾರು ಸರಕಾರವನ್ನು ವಿರೋಧಿಸುತ್ತಾರೋ ಅವರೆಲ್ಲರನ್ನು ಕೂಡ ಭಯೋತ್ಪಾದನೆಯ ಹೆಸರಲ್ಲಿ ಈ ಅಸದ್ ಜೈಲಿಗಟ್ಟುತ್ತಿದ್ದರು.
2019ರಲ್ಲಿ ಈ ಹಾಲ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಬೇರೆ ಬೇರೆ ಜೈಲುಗಳಲ್ಲಿ ಇಡಲಾಗಿತ್ತು. ತಾನು ಮತ್ತೊಮ್ಮೆ ಈ ಭೂಮಿಗೆ ಹುಟ್ಟಿ ಬಂದ ಅನುಭವವಾಯಿತು ಎಂದು ಜೈಲಿನಿಂದ ವಿಮೋಚನೆಗೊಂಡ ಬಳಿಕ ಹಾಲ ಹೇಳಿದ್ದಾರೆ.
1,36,614 ಮಂದಿಯನ್ನು ಆಸದ್ ಸರಕಾರ ಜೈಲಿಗಟ್ಟಿತ್ತು. ಸರ್ಕಾರದ ವಿರುದ್ಧ ಬಂಡೆದ್ದಿದ್ದಾರೆ ಎಂಬ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ಇವರೆಲ್ಲರನ್ನೂ ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿತ್ತು. ಎಲ್ಲಿ ಪ್ರತಿಭಟನೆಗಳಾಗುತ್ತೋ ಅಲ್ಲಿಂದ ಜನರನ್ನು ಕರೆತಂದು ಇಂತಹ ಜೈಲುಗಳಲ್ಲಿ ಇಡಲಾಗುತ್ತಿತ್ತು. ಜೈಲುಗಳಲ್ಲಿ ತೀವ್ರ ದೌರ್ಜನ್ಯ ನಡೆಸಲಾಗುತ್ತಿತ್ತಲ್ಲದೆ ಹಸಿವಿಗೆ ದೂಡಲಾಗುತ್ತಿತ್ತು.
ಜೈಲಿನಲ್ಲಿ ದೌರ್ಜನ್ಯಕ್ಕೆ ತುತ್ತಾದ 16 ವರ್ಷದ ಯುವತಿ ಸಾವಿಗೀಡಾದುದನ್ನು ಕೂಡ ಹಾಲ ನೆನಪಿಸಿಕೊಂಡಿದ್ದಾರೆ. ಮದುವೆಯಾಗಿ ಎರಡು ತಿಂಗಳಲ್ಲಿ ಈ ಯುವತಿಯನ್ನು ಜೈಲಿಗೆ ತಳ್ಳಲಾಗಿತ್ತು. ಯೂನಿವರ್ಸಿಟಿಯಲ್ಲಿ ಪ್ರತಿಭಟನೆ ನಡೆಸಿದವರ ಜೊತೆಗೆ ಈ ಯುವತಿಯನ್ನೂ ತಂದು ಜೈಲಿಗೆ ಹಾಕಲಾಗಿತ್ತು.
ಜೈಲಿನ ಅನುಭವ ಎಂದು ಕೂಡ ಮಾಸದ ಅನುಭವವಾಗಿದೆ ಎಂದು 49 ವರ್ಷದ ಶಾಫೀ ಅಲ್ ಯಾಸಿನ್ ಹೇಳಿದ್ದಾರೆ. ಅಲೆಪ್ಪೋದ ಜೈಲಿನಿಂದ ಬಂಡುಕೋರರು ಈ ಶಾಫಿಯನ್ನು ವಿಮೋಚಿಸಿದ್ದಾರೆ. ತಾನಿರುವ ಜೈಲಿನಲ್ಲಿ ಐದು ಸಾವಿರಕ್ಕಿಂತಲೂ ಅಧಿಕ ಕೈದಿಗಳಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. 20 11ರಲ್ಲಿ ಪ್ರಭುತ್ವ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದಲ್ಲಿ 31 ವರ್ಷಗಳ ಶಿಕ್ಷೆಯನ್ನು ಈತನಿಗೆ ವಿಧಿಸಲಾಗಿತ್ತು. ಕಳೆದ 13 ವರ್ಷಗಳಿಂದ ಈತ ಜೈಲಲ್ಲಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj