ನಾವಿದ್ದೀವಿ: ಫೆಲೆಸ್ತೀನಿಯರಿಗೆ ಸಂಸದೆ ಪ್ರಿಯಾಂಕ ಗಾಂಧಿ ಬೆಂಬಲ
ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಫೆಲೆಸ್ತೀನಿಯರಿಗೆ ಸಂಸದೆ ಪ್ರಿಯಾಂಕ ಗಾಂಧಿ ಬೆಂಬಲವನ್ನು ಸಾರಿದ್ದಾರೆ. ಭಾರತದಲ್ಲಿರುವ ಫೆಲೆಸ್ತೀನ್ ರಾಜತಾಂತ್ರಿಕ ಪ್ರತಿನಿಧಿ ಡಾ ಆಬಿದ್ ಎಲ್ರಾಸೇಸ್ ಅಬು ಜಾಸಿರ್ ಅವರ ಜೊತೆ ತನ್ನ ವಸತಿಯಲ್ಲಿ ನಡೆಸಿದ ಮಾತುಕತೆಯ ವೇಳೆ ಅವರು ಈ ಬೆಂಬಲವನ್ನ ಘೋಷಿಸಿದ್ದಾರೆ.
ಫೆಲೆಸ್ತೀನ್ ಜೊತೆಗೆ ತನಗಿರುವ ಸಂಬಂಧವನ್ನ ಪ್ರಿಯಾಂಕ ಈ ಸಂದರ್ಭದಲ್ಲಿ ಡಾಕ್ಟರ್ ಆಬಿದ್ ಅವರಿಗೆ ತಿಳಿಯಪಡಿಸಿದ್ದಾರೆ. ತಾನು ಚಿಕ್ಕವಳಿರುವಾಗ ಪಿ ಎಲ್ ಓದ ನಾಯಕ ಯಾಸಿರ್ ಅರಫಾತ್ ಅವರನ್ನು ಭೇಟಿಯಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದವೇಳೆ ತಾನು ಅರಫಾತ್ ರನ್ನು ಭೇಟಿಯಾಗಿದ್ದೆ ಎಂದು ಪ್ರಿಯಾಂಕ ಹೇಳಿದ್ದಾರೆ.
ಅದೇ ವೇಳೆ ಫೆಲೆಸ್ತೀನಿ ನ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದಾಗಿ ಮಕ್ಕಳು ಮತ್ತು ಮಹಿಳೆಯರು ಅನುಭವಿಸುತ್ತಿರುವ ಸಂಕಟ ಮತ್ತು ಸಾವುಗಳ ಬಗ್ಗೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಝಾದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕ್ರೌರ್ಯ ನಡೆಯುತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯ ಮೌನವಾಗಿರುವುದೇಕೆ ಎಂದವರು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj