ಇಸ್ರೇಲಿಗರನ್ನು ಬ್ರಿಟನ್ನಿನ ರಾಣಿ ಎಲಿಜಬೆತ್ ಭಯೋತ್ಪಾದಕರಂತೆ ಕಾಣುತ್ತಿದ್ದರು: ಇಸ್ರೇಲ್ ಮಾಜಿ ಅಧ್ಯಕ್ಷರ ಹೇಳಿಕೆ
ಇಸ್ರೇಲಿಗರನ್ನು ಬ್ರಿಟನ್ನಿನ ರಾಣಿ ಎಲಿಜಬೆತ್ ಅವರು ಭಯೋತ್ಪಾದಕರಂತೆ ಅಥವಾ ಭಯೋತ್ಪಾದಕರ ಮಕ್ಕಳಂತೆ ಕಾಣುತ್ತಿದ್ದರು ಎಂದು ಇಸ್ರೇಲ್ ನ ಮಾಜಿ ಅಧ್ಯಕ್ಷ ರುಅನ್ ರೀವೆಲಿನ್ ಹೇಳಿದ್ದಾರೆ. ಲಂಡನ್ನಿನಲ್ಲಿ ನಡೆದ ಟೆಕ್ ನಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 100ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಾ ಅವರು ಈ ಸತ್ಯ ಬಹಿರಂಗಪಡಿಸಿದ್ದಾರೆ.
ನಮ್ಮ ಮತ್ತು ಎಲಿಜಬೆತ್ ರಾಣಿಯ ನಡುವಿನ ಸಂಬಂಧ ನಿರಾಶಾದಾಯಕ ವಾದುದಾಗಿತ್ತು. ಯಾಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಭಯೋತ್ಪಾದಕರೋ ಅಥವಾ ಭಯೋತ್ಪಾದಕರ ಮಕ್ಕಳೋ ಎಂಬಂತೆ ಅವರು ನೋಡುತ್ತಿದ್ದರು ಎಂದು ಅವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ದೊರೆ ಮೂರನೇ ಚಾರ್ಲ್ಸ್ ಹಾಗಿರಲಿಲ್ಲ. ಅವರು ನಮ್ಮ ಜೊತೆ ಬಹಳ ಸೌಹಾರ್ದದಿಂದ ವರ್ತಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಅಂದಹಾಗೆ ಇಸ್ರೇಲಿನ ಮಾಜಿ ಪ್ರಧಾನಿಗಳಾದ ಶಿಮೊನ್ ಪೆರಿಸ್ ಮತ್ತು ಇಸಾಕ್ ರಾಬಿನ್ ಅವರ ಅಂತಿಮ ಸಂಸ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಎರಡು ಬಾರಿ ಅನೌಪಚಾರಿಕವಾಗಿ ಮತ್ತು 2020ರಲ್ಲಿ ಔಪಚಾರಿಕವಾಗಿ ದೊರೆ ಚಾರ್ಲ್ಸ್ ಇಸ್ರೇಲ್ ಗೆ ಭೇಟಿ ಕೊಟ್ಟಿದ್ದರು. ಆದರೆ ತಮ್ಮ ಎಪ್ಪತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ರಾಣಿ ಎಲಿಜಬೆತ್ ಅವರು ಒಮ್ಮೆಯೂ ಇಸ್ರೇಲ್ ಗೆ ಭೇಟಿ ನೀಡಿರಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj