ಮುಸ್ಲಿಂ ಯುವಕನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್: ‘ಆಕೆಯ ಇಷ್ಟ” ಎಂದ ಕೋರ್ಟ್
ಮುಸ್ಲಿಂ ಯುವಕನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಹಿಂದೂ ಯುವತಿಗೆ ಆಕೆಯ ಇಷ್ಟದಂತೆ ನಡೆದುಕೊಳ್ಳಲು ಬಾಂಬೆ ಹೈಕೋರ್ಟು ಅನುಮತಿ ನೀಡಿದೆ. ಆಕೆಯನ್ನು ಬಲವಂತವಾಗಿ ಈ ಮುಸ್ಲಿಂ ಯುವಕ ತಡೆದಿರಿಸಿದ್ದಾನೆ ಎಂಬ ಪೋಷಕರ ಆರೋಪದ ಹೊರತಾಗಿಯೂ ಹೈಕೋರ್ಟು ಈ ನಿರ್ಧಾರ ಪ್ರಕಟಿಸಿದೆ.
ಯುವತಿಯನ್ನು ಪೋಷಕರ ಜೊತೆ ಕಳುಹಿಸಿಕೊಡಲು ಒಪ್ಪದ ನ್ಯಾಯಾಲಯ ಆಕೆ ಇಚ್ಛೆಯಂತೆ ಮುಂದುವರೆಯಲು ಅವಕಾಶವನ್ನು ಮಾಡಿಕೊಟ್ಟಿದೆ.
ಅವಳು ಬಯಸಿದ್ದನ್ನು ಮಾಡಲಿ. ಇದು ಅವಳ ಜೀವನ. ನಾವು ಅವಳಿಗೆ ಹಾರೈಸಬಹುದಷ್ಟೇ ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಶಾ ದೇಶಪಾಂಡೆ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯ ಪಟ್ಟಿದೆ.
ನಾವು ಅವಳನ್ನು ಪೋಷಕರ ಬಳಿಗೆ ಹೋಗುವಂತೆ ಕೇಳಿದ್ದೆವು ಆದರೆ ಅವಳು ಒಪ್ಪಿಲ್ಲ. ಅವಳು ತನ್ನ ಯೋಗಕ್ಷೇಮದ ಬಗ್ಗೆ ಪ್ರಜ್ಞೆ ಹೊಂದಿದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಯುವತಿ ಮುಸ್ಲಿಂ ಯುವಕನೊಂದಿಗೆ ಜೀವಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಕೆಯ ಪೋಷಕರು ಮತ್ತು ಸಂಘ ಪರಿವಾರದ ಸದಸ್ಯರು ದೂರು ಸಲ್ಲಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj