ಸಿರಿಯಾದಿಂದ ಅಸದ್ ರನ್ನು ರಷ್ಯಾಕ್ಕೆ ಏರ್ ಲಿಫ್ಟ್ ವಿಚಾರ: 250 ಮಿಲಿಯನ್ ಡಾಲರ್ ಖರ್ಚು
ಸಿರಿಯಾದಿಂದ ಅಸದ್ ಅವರನ್ನು ರಷ್ಯಾಕ್ಕೆ ಏರ್ ಲಿಫ್ಟ್ ಮಾಡುವುದಕ್ಕೆ 250 ಮಿಲಿಯನ್ ಡಾಲರ್ ಖರ್ಚಾಗಿದೆ ಎಂದು ವರದಿಯಾಗಿದೆ. ಆದರೆ ಈ ಹಣದಲ್ಲಿ ಒಂದು ಪೈಸೆಯನ್ನೂ ಅವರು ತನ್ನ ಕಿಸೆಯಿಂದ ಖರ್ಚು ಮಾಡಿಲ್ಲ. ಈ ಎಲ್ಲವನ್ನೂ ಕೂಡ ಸರ್ಕಾರದ ಖಜಾನೆಯಿಂದಲೇ ಖರ್ಚು ಮಾಡಿದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.
ಅಸದ್ ಅವರ ಆಡಳಿತ ಕಾಲದಲ್ಲಿ ಸಿರಿಯಾದ ಸೆಂಟ್ರಲ್ ಬ್ಯಾಂಕ್ ಎರಡು ವರ್ಷಗಳ ನಡುವೆ ರಷ್ಯಾ ಕ್ಕೆ ಸುಮಾರು 2020 ಕೋಟಿ ರೂಪಾಯಿಯನ್ನು ಸಾಗಿಸಿರುವುದಾಗಿ ವರದಿಯಾಗಿದೆ ಸುಮಾರು ಎರಡು ಟನ್ನಷ್ಟು ಭಾರವಿರುವ ನೋಟುಗಳನ್ನು ಸಿರಿಯಾದ ಸೆಂಟ್ರಲ್ ಬ್ಯಾಂಕ್ ವಿಮಾನದ ಮೂಲಕ ರಷ್ಯಾಕ್ಕೆ ಸಾಗಿಸಿದೆ ನೂರರ ಡಾಲರ್ ನೋಟುಗಳು ಮತ್ತು 500ರ ಯೂರೊ ನೋಟುಗಳನ್ನು ಇದರಲ್ಲಿ ಸಾಗಿಸಲಾಗಿದೆ. ಈ ಹಣವನ್ನು ರಷ್ಯಾದ ಒಂದು ಬ್ಯಾಂಕಿನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
2018 ಮತ್ತು 19ರ ನಡುವೆ ಈ ಬೆಳವಣಿಗೆ ನಡೆದಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj