ಸಿರಿಯದಿಂದ ವಶಪಡಿಸಿಕೊಳ್ಳಲಾದ ಗೋಲಾನ್ ಬೆಟ್ಟದಲ್ಲಿ ಜನಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಇಸ್ರೇಲ್ ಪ್ಲ್ಯಾನ್
1967ರ ಅರಬ್ ಯುದ್ಧದ ಬಳಿಕ ಸಿರಿಯದಿಂದ ವಶಪಡಿಸಿಕೊಳ್ಳಲಾದ ಗೋಲಾನ್ ಬೆಟ್ಟದಲ್ಲಿ ಇಸ್ರೇಲ್ ತನ್ನ ಜನಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ತೀರ್ಮಾನಿಸಿದೆ. ಗೋಲಾನ್ ಬೆಟ್ಟದಲ್ಲಿ ವಸತಿಗಳನ್ನು ನಿರ್ಮಿಸಿ ಯಹೂದಿಗಳನ್ನು ಕರೆತಂದು ನೆಲೆಗೊಳಿಸುವ ಯೋಜನೆಗೆ ಇಸ್ರೇಲ್ ಪಾರ್ಲಿಮೆಂಟ್ ಅಂಗೀಕಾರ ನೀಡಿದೆ.
ಸಿರಿಯಾದ ಶೂನ್ಯ ಸ್ಥಿತಿಯನ್ನು ದುರುಪಯೋಗಿಸಿಕೊಂಡ ಇಸ್ರೇಲ್ 19 74 ರಲ್ಲಿ ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ನಡೆಸಿದ್ದ ಒಪ್ಪಂದವನ್ನು ಉಲ್ಲಂಘಿಸಿತು. ಇಸ್ರೇಲ್ ಪ್ರವೇಶಿಸಬಾರದ ಗಡಿ ರೇಖೆಯನ್ನು ದಾಟಿ ಸಿರಿಯಾದ ರಾಜಧಾನಿ ದಮಾಸ್ಕಸ್ ವರೆಗೆ ತಲುಪಿತ್ತು. ಮಾತ್ರ ಅಲ್ಲ ಸಿರಿಯಾದ ಶಸ್ತ್ರಾಸ್ತ್ರಗಳ ಮೇಲೆ ಬಾಂಬ್ ಹಾಕಿತ್ತು. ಆದರೆ ಈ ಯಾವ ಅತಿಕ್ರಮಣಕ್ಕೂ ಸಿರಿಯಾದಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ.. ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡ ಇಸ್ರೇಲ್ ತನ್ನ ವಶದಲ್ಲಿರುವ ಗೋಲಾನ್ ಬೆಟ್ಟದಲ್ಲಿ ಈಗಿರುವ ಜನಸಂಖ್ಯೆಯ ದುಪ್ಪಟ್ಟು ಜನಸಂಖ್ಯೆಯನ್ನು ಸೇರಿಸುವುದಕ್ಕೆ ತೀರ್ಮಾನಿಸಿದೆ. ಇದಕ್ಕಾಗಿ 11 ಮಿಲಿಯನ್ ಡಾಲರ್ ನ ಸೆಟಲ್ ಮೆಂಟ್ ಯೋಜನೆಯನ್ನು ಅದು ತಯಾರಿಸಿದೆ. ಈಗ ಗೋಲಾನ್ ಬೆಟ್ಟದಲ್ಲಿ 31 ಸಾವಿರಕ್ಕಿಂತಲೂ ಅಧಿಕ ಜನರು ವಾಸಿಸುತ್ತಿದ್ದಾರೆ.
ಈ ಗೋಲನ್ ಬೆಟ್ಟದಲ್ಲಿ ಇಸ್ರೇಲ್ ನ ಸ್ವಯಂ ಆಡಳಿತವನ್ನು 2019ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಸಮರ್ಥಿಸಿದ್ದರು. ಇದೀಗ ಜನವರಿ 20ರಂದು ಮರಳಿ ಟ್ರಂಪ ಅಧಿಕಾರಕ್ಕೆ ಬರುವುದರಿಂದ ಈ ಸೆಟಲ್ಮೆಂಟ್ ಯೋಜನೆಗೆ ಇನ್ನಷ್ಟು ಸಮರ್ಥನೆ ದೊರಕಿತು ಎಂದು ಇಸ್ರೇಲ್ ಅಂದುಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj