ಇಸ್ರೇಲ್ ಕ್ರೌರ್ಯದ ವಿರುದ್ಧ ಸಿಡಿದೆದ್ದ ಮಹಿಳೆ: ಪಾರ್ಲಿಮೆಂಟ್ ನಲ್ಲೇ ಕಿಡಿ
ಹಮಾಸ್ ಬಂಧನದಲ್ಲಿರುವ ಒತ್ತೆಯಾಳುಗಳನ್ನು 437 ದಿನಗಳ ಬಳಿಕವೂ ಬಿಡಿಸಿಕೊಂಡು ಬರಲಾಗದೆ ಇರುವುದಕ್ಕೆ ಒತ್ತೆಯಾಳುಗಳಲ್ಲಿ ಓರ್ವ ಯುವಕನ ತಾಯಿ ಇಸ್ರೇಲ್ ಪಾರ್ಲಿಮೆಂಟಿನಲ್ಲಿ ಸಿಡಿದೆದ್ದಿದ್ದಾರೆ. ಸನ್ ಗೌಕ್ ಎಂಬ ಒತ್ತೆಯಾಳು ಯುವಕನ ತಾಯಿ ಐನವು ಸನ್ ಗೌಕ್ ಎಂಬವರು ನೇತನ್ಯಾಹು ಸರ್ಕಾರದ ವಿರುದ್ಧ ಪಾರ್ಲಿಮೆಂಟಿನಲ್ಲಿ ಆಕ್ರೋಶ ಭರಿತ ಮಾತನಾಡಿದ್ದಾರೆ.
ಒಂದು ವೇಳೆ ನನ್ನ ಮಗ ಗಾಝಾದಲ್ಲಿ ಮೃತಪಟ್ಟರೆ ನಾನು ಕಾನೂನು ಕೈಗೆತ್ತಿಕೊಳ್ಳುವೆ ಎಂದು ಅಬ್ಬರಿಸಿದ್ದಾರೆ.
ಈ ನಡುವೆ ಭದ್ರತಾ ಸಿಬ್ಬಂದಿಗಳು ಅವರನ್ನು ಸದನದಿಂದ ಹೊರಕ್ಕೆ ಕೊಂಡೊಯ್ದರು.
ಇಸ್ರೇಲ್ ಸರಕಾರ ಜನರೊಂದಿಗೆ ಸುಳ್ಳು ಹೇಳ್ತಾ ಇದೆ. ಬಂಧಿಗಳ ವಿಮೋಚನೆಗಾಗಿ ಅದು ಏನನ್ನೂ ಮಾಡಿಲ್ಲ. ಆ ಕುರಿತಂತೆ ಒಪ್ಪಂದ ಒಂದಕ್ಕೆ ಬರುವುದಕ್ಕೆ ಅದು ತಯಾರಿಯನ್ನೇ ನಡೆಸಿಲ್ಲ ಎಂದು ಈ ತಾಯಿ ಆರೋಪಿಸಿದ್ದಾರೆ.
ನನ್ನ ಮಗ ಈಗಲೂ ಜೀವಂತವಿದ್ದಾನೆ. ಬಂಧಿಗಳಲ್ಲಿ ಕೆಲವೇ ಮಂದಿ ಮಾತ್ರ ಈಗ ಜೀವಂತವಿದ್ದಾರೆ ಎಂಬುದು ನನ್ನ ನಂಬಿಕೆ. ಒಂದು ವೇಳೆ ನನ್ನ ಮಗನನ್ನು ನೀವು ಶವವಾಗಿ ಕರೆತಂದರೆ ನಾನು ನಿಮ್ಮನ್ನು ಕೋರ್ಟಿಗೆ ಎಳೆಯಲಾರೆ. ಬದಲು ಕಾನೂನನ್ನು ಕೈಗೆತ್ತಿಕೊಳ್ಳುವೆ ಎಂದವರು ಎಚ್ಚರಿಸಿದ್ದಾರೆ.
ಅಕ್ಟೋಬರ್ ಏಳರಂದು ಹಮಾಸ್ ಕೈಯಲ್ಲಿ ಒತ್ತೆಯಾಳಾದವರನ್ನು ಜೀವಂತವಾಗಿ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಅವರನ್ನು ಬಿಡುಗಡೆಗೊಳಿಸುವುದಕ್ಕೆ ಈ ಸರಕಾರ ಏನನ್ನು ಮಾಡಿಲ್ಲ. ನಾವೆಲ್ಲರನ್ನೂ ಮರಳಿ ಕರೆತರುತ್ತೇವೆ ಅನ್ನುವುದು ಅಪ್ಪಟ ಸುಳ್ಳಾಗಿದೆ. ನಿಮಗೆ ನಿಮ್ಮ ಆಡಳಿತವನ್ನು ಸುರಕ್ಷಿತಗೊಳಿಸುವುದಷ್ಟೇ ಮುಖ್ಯವಾಗಿದೆ ಎಂದು ಅವರು ಪಾರ್ಲಿಮೆಂಟಲ್ಲಿ ಅಬ್ಬರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj