ಆಸ್ಪತ್ರೆಯ ಮೇಲ್ಛಾವಣಿ ಪದರ ಕುಸಿತ: ಮಗು ಸಹಿತ ಮೂವರಿಗೆ ಗಾಯ
ದಾವಣಗೆರೆ: ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯನ್ನು ನೋಡಲು ಬಂದಿದ್ದ ಇಬ್ಬರು ಮಕ್ಕಳ ಮೇಲೆ ಆಸ್ಪತ್ರೆಯ ಮೇಲ್ಛಾವಣಿಯ ಕಾಂಕ್ರೀಟ್ ಕಳಚಿ ಬಿದ್ದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಸಹೋದರಿಯರು ಹಾಗೂ 2 ವರ್ಷದ ಮಗುವಿಗೆ ಗಾಯವಾಗಿದೆ. ಗಾಯಾಳುಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಪ್ರೇಮಕ್ಕ(46), ಕಾವೇರಿ(36) ನೇತ್ರಾ(2) ಗಾಯಗೊಂಡವರಾಗಿದ್ದಾರೆ. ಮಗುವಿನ ತಲೆಗೆ ಹಾಗೂ ಮಹಿಳೆಯರ ಕೈಗೆ ಮತ್ತು ಇನ್ನೊಬ್ಬರ ಬೆನ್ನಿಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ವಿಜಯನಗರ ಜಿಲ್ಲೆಯ ಹಲವಾಗಲು ಹಾಗೂ ಹಳಲು ಗ್ರಾಮದ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ.
ಜಿಲ್ಲಾಸ್ಪತ್ರೆ ಕಟ್ಟಡ ಬಹುತೇಕ ಬಿರುಕುಬಿಟ್ಟಿದೆ. ಆದರೂ ಜಿಲ್ಲಾಡಳಿತ ದುರಸ್ತಿಗೆ ಮುಂದಾಗಿಲ್ಲ. ಇದೀಗ ನಡೆದಿರುವ ಘಟನೆ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: