ಮೊಸಳೆ ಬಂತು ಮೊಸಳೆ: ಕಾಲುದಾರಿಯಲ್ಲಿದ್ದ ಮೊಸಳೆಯನ್ನು ಕೇವಲ ಕೋಲಿನಿಂದ ಓಡಿಸಿದ ವ್ಯಕ್ತಿ
ತಿರುವಣ್ಣಾಮಲೈನ ಸಥಾನೂರು ಅಣೆಕಟ್ಟಿನ ನೀರಿನ ಕಾಲುವೆಗಳಲ್ಲಿ ಒಂದರ ಕಾಲುದಾರಿಯಲ್ಲಿದ್ದ 8 ಅಡಿ ಮೊಸಳೆಯೊಂದನ್ನು ಕಾರ್ಮಿಕರೊಬ್ಬರು ಕೇವಲ ಕೋಲಿನೊಂದಿಗೆ ಓಡಿಸಿದ ಘಟನೆ ನಡೆದಿದೆ.
ಇತ್ತೀಚಿನ ಪ್ರವಾಹದಲ್ಲಿ ಕೊಚ್ಚಿಹೋದ ನಂತರ ಮೊಸಳೆಯು ಪ್ರವಾಸಿಗರಿಗಾಗಿ ನಿಗದಿಪಡಿಸಿದ ಮಾರ್ಗವನ್ನು ಪ್ರವೇಶಿಸಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ, ಇತ್ತೀಚೆಗೆ ಸುಮಾರು ಎರಡು ಲಕ್ಷ ಕ್ಯೂಸೆಕ್ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ.
ಅಣೆಕಟ್ಟಿನ ಅಧಿಕಾರಿಗಳು ತಕ್ಷಣವೇ ಸೈರನ್ ಬಳಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲಿದ್ದ ವ್ಯಕ್ತಿಯು ಮೊಸಳೆಯನ್ನು ಕೇವಲ ಉದ್ದನೆಯ ಕೋಲಿನೊಂದಿಗೆ ಭಯವಿಲ್ಲದೆ ಬೆನ್ನಟ್ಟುತ್ತಿರುವುದು ಕಂಡುಬಂತು. ಮೊಸಳೆಯನ್ನು ಓಡಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj