SBI ಬ್ಯಾಂಕ್ ನಲ್ಲಿ ಭರ್ಜರಿ 13 ಸಾವಿರಕ್ಕಿಂತಲೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ - Mahanayaka
1:45 PM Wednesday 18 - December 2024

SBI ಬ್ಯಾಂಕ್ ನಲ್ಲಿ ಭರ್ಜರಿ 13 ಸಾವಿರಕ್ಕಿಂತಲೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

sbi bank
18/12/2024

SBI BANK Junior Associates Recruitment 2024 :  ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ 13,000ಕ್ಕೂ ಹೆಚ್ಚು ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಇದೀಗ ಹೊಸ ಅಧಿಸೂಚನೆ ಪ್ರಕಟಿಸಿದೆ.

ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅವಧಿ, ಅರ್ಜಿ ಸಲ್ಲಿಸಲು ಇರಬೇಕಾದ ಸಂಪೂರ್ಣ ಅರ್ಹತೆಗಳ ವಿವರ, ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಮತ್ತು ಅರ್ಜಿ ಸಲ್ಲಿಸಲಿಕ್ಕೆ ಬೇಕಾಗಿರುವಂತಹ ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿದೆ.

ನೇಮಕಾತಿ ಹುದ್ದೆಗಳ ವಿವರ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 13,735 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.

 ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು?

ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಯಾವುದಾದರೂ ಒಂದು ವಿಷಯದಲ್ಲಿ ಪದವಿ ಶಿಕ್ಷಣ ಮುಗಿಸಿರಬೇಕು. ಅದೇ ರೀತಿ ವಯೋಮಿತಿ ಅರ್ಹತೆ ನೋಡುವುದಾದರೆ ಗರಿಷ್ಠ 28 ವರ್ಷದ ಒಳಗಿರಬೇಕು ಮತ್ತು 20 ವರ್ಷದ ಮೇಲ್ಪಟ್ಟಿರಬೇಕು. ನೀವು ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವುದಾದರೆ ನಿಮಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ – ₹24,050 ರೂ. ನಿಂದ ₹64,480ರೂ. ವರೆಗೆ.

 ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಅರ್ಜಿ ಶುಲ್ಕ :

* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 750ರೂ.

* ಇನ್ನುಳಿದ ವರ್ಗದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

 ಅರ್ಜಿ ಸಲ್ಲಿಸಲಿಕ್ಕೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳು:

* ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ದಿನಾಂಕ – 17 ಡಿಸೆಂಬರ್ 2024

* ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಕೊನೆಯ ದಿನಾಂಕ – 07 ಜನವರಿ 2025

ಅರ್ಜಿ ಸಲ್ಲಿಸಲು ವೆಬ್ ಸೈಟ್ ಲಿಂಕ್:  https://bank.sbi/careers


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ